varthabharthi

ಗಲ್ಫ್ ಸುದ್ದಿ

ದುಬೈ: 'ಬಿಸಿಎಫ್ ಇಫ್ತಾರ್ ಕೂಟ 2019', ಸ್ಕಾಲರ್ಶಿಪ್ ಪ್ರಸ್ತಾವನಾ ಕಾರ್ಯಕ್ರಮ

ವಾರ್ತಾ ಭಾರತಿ : 16 May, 2019

ದುಬೈ: ಅನಿವಾಸಿ ಕನ್ನಡಿಗರ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ಕಲ್ಚರಲ್ ಫೋರಂ ( ಬಿಸಿಎಫ್) ವತಿಯಿಂದ ದುಬೈಯಾ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ 'ಇಫ್ತಾರ್ ಮೀಟ್ 2019' ನಡೆಯಿತು.

ಯುಎಇ ಯಾದ್ಯಂತ ಸುಮಾರು ಸಾವಿರಕ್ಕೂ ಮಿಕ್ಕಿ ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ ಸಮಾಜದ ಅನಿವಾಸಿ ಕನ್ನಡ ಹಾಗೂ ಕನ್ನಡೇತರರು ಇಫ್ತಾರ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇಫ್ತಾರ್ ಗೆ ಮುನ್ನ ಇಕ್ಬಾಲ್ ಕುಂದಾಪುರ (ಮೇಫ), ಅಶ್ರಫ್ ಸತ್ತಿಕಲ್ ಸಹಭಾಗಿತ್ವದಲ್ಲಿ ಸಜಿಪ ಅಬ್ದುಲ್ ರಹ್ಮಾನ್, ಅಮೀರ್ ಹಳೆಯಂಗಡಿ, ರಿಯಾಝ್ ಸುರತ್ಕಲ್ ಅವರ ಸಹಯೋಗದೊಂದಿಗೆ ಇಸ್ಲಾಮಿಕ್ ರಸ ಪ್ರಶ್ನೆಗಳ ಸ್ಪರ್ಧೆ ನಡೆಸಲಾಯಿತು. ಡಿಕೆಎಸ್ ಸಿ ಗೌರವಾಧ್ಯಕ್ಷ  ತಾಹ ಬಾಫಖಿ ತಂಙಳ್ ದುವಾ ನೆರವೇರಿಸಿದರು. ನಂತರ ಬಿಸಿಎಫ್ ಸ್ಕಾಲರ್ಷಿಪ್ ನಿರೂಪಣಾ ಕಾರ್ಯಕ್ರಮ ನಡೆಯಿತು.

ಬಿಸಿಎಫ್ ಅಧ್ಯಕ್ಷ  ಡಾ ಬಿಕೆ ಯೂಸುಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಿಸಿಫ್ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್ ಅತಿಥಿ ಗಳನ್ನು ಸ್ವಾಗತಿಸಿದರು. ಅಫ್ರಾಝ್ ಅಫೀಕ್ ಹುಸೈನ್ ಕಿರಾಅತ್ ಪಠಿಸಿದರು.

ನಂತರ ಮಾತನಾಡಿದ ಡಾ. ಬಿಕೆ ಯೂಸುಫ್ ಅವರು ಬಿಸಿಎಫ್ ಎಂಬ ಜನಪ್ರಿಯ ಸಮಾಜ ಸೇವಾ ಸಂಸ್ಥೆಯ ಮೂಲಕ ತನ್ನ ದೇಶವಾಸಿಗಳ ಸೇವೆಯನ್ನು ಮಾಡುವ ಅವಕಾಶವನ್ನು ಒದಗಿಸಿದ ದೇವನಿಗೆ ಸ್ತುತಿಸುತ್ತಾ, ಉತ್ತಮ ಸೇವೆಯನ್ನು ಮಾಡುವ ಅವಕಾಶ ಕೊಟ್ಟ ಬಿಸಿಎಫ್ ಗೆ ತಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.

ಮುಂದಿನ ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಬಿಸಿಎಫ್ ಹಮ್ಮಿಕೊಂಡಿದ್ದು ತಮ್ಮೆಲ್ಲರ ಪಾಲ್ಗೊಳ್ಳುವಿಕೆಯ ಮೂಲಕ ಬಿಸಿಎಫ್ ದೊಡ್ಡ ರೀತಿಯಲ್ಲಿ ಶೈಕ್ಷಣಿಕ ಸೇವೆಯನ್ನು ಸಮಾಜಕ್ಕೆ ನೀಡುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹೊಂದಿದೆ ಎಂದು ತಿಳಿಸಿದರು.

ಬಿಸಿಎಫ್ ಇಫ್ತಾರ್ ಕಾರ್ಯಕ್ರಮದ ಚೆಯರ್ಮ್ಯಾನ್ ಹಾಗೂ ಬಿಸಿಎಫ್ ಉಪಾಧ್ಯಕ್ಷರೂ ಆದ ಅಬ್ದುಲ್ ಲತೀಫ್ ಮುಲ್ಕಿ ಮಾತನಾಡಿ, ಶುಭ ಹಾರೈಸಿದರು.

ಬಿಸಿಎಫ್ ಸ್ಕಾಲರ್ಷಿಪ್ ಕಮಿಟಿ ಹಾಗೂ ಬಿಸಿಎಫ್  ಉಪಾಧ್ಯಕ್ಷ  ಎಂ.ಇ. ಮೂಳೂರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಕರ್ನಾಟಕದ ಎಲ್ಲ ಜಾತಿ ಪಂಗಡಕ್ಕೆ ಸೇರಿದ ಬಡ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಸುಮಾರು 600 ರಿಂದ 700 ರಷ್ಟು ಮಕ್ಕಳಿಗೆ  ಪಿಯುಸಿ ಯಿಂದ ಹಿಡಿದು ಸ್ನಾತಕೋತ್ತರ ಪದವಿ ವರೆಗೆ ವಿವಿಧ ಕ್ಷೆತ್ರಗಳಲ್ಲಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ ಎಂದು ವಿವರಿಸಿದರು.

ಯುಎಇಯ ಪ್ರಖ್ಯಾತ ಉದ್ಯಮಿಯೂ, ಸಮಾಜ ಸೇವಕರೂ, ಬಿಸಿಎಫ್ ಪ್ರಧಾನ ಗೌರವ ಸಲಹೆಗಾರರೂ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಚೆಯರ್ಮ್ಯಾನ್ ಆಗಿರುವ ಝಫರುಲ್ಲಾ ಖಾನ್ ಮಂಡ್ಯ ಮುಖ್ಯ ಅತಿಥಿಯಾಗಿ ಮಾತನಾಡಿ, ಶುಭ ಹಾರೈಸಿದರು. ನಂತರ ಅವರನ್ನು ಬಿಸಿಎಫ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಫಿಝ್ಯ್ ಗ್ರೂಪ್ ಚೆಯರ್ಮ್ಯಾನ್, ಖ್ಯಾತ ಉದ್ಯಮಿ ಶಬ್ಬೀರ್ ಸೈಫುದ್ದೀನ್, ಎಮಿರೇಟ್ಸ್ ಗ್ಲಾಸ್ ಪ್ರೆಸಿಡೆಂಟ್ ರಿಝ್ವಾನುಲ್ಲಾ ಖಾನ್, ಝಯ್ನ್ ಝಫರುಲ್ಲಾ ಖಾನ್, ಅಶ್ರಫ್ ಕೆ.ಎಂ., ನವೀದ್, ಡಾ. ಸಮೀರ್ ಯೂಸುಫ್, ಅಲ ಬಾಹರ್ ಹೋಟೆಲ್ಸ್ ನ ಅಸ್ಲಾಂ, ಇರ್ಷಾದ್, ನಫೀಸ್, ನವಾಝ್ ಕೋಟೆಕಾರ್, ಶುಕೂರ್ ಮನಿಲಾ,ಯೂಸುಫ್ ಅರ್ಲಪಡವು ಮೊದಲಾದವರು ಉಪಸ್ಥಿತರಿದ್ದರು.

'ಬಿಸಿಎಫ್ ಸ್ಕಾಲರ್ಷಿಪ್ 2019' ಬಗ್ಗೆ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮೊಹಮ್ಮದ್ ವಿವರಿಸಿ, ಸ್ಕಾಲರ್ಶಿಪ್ ದೇಣಿಗೆ ಸಂಗ್ರಹಿಸಲಾಯಿತು.

ಯುಎಇ ಕನ್ನಡ ಪರ ಸಂಘಟನೆಗಳಾದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್, ಕೆಸಿಎಫ್, ಶಾರ್ಜಾ ಕರ್ನಾಟಕ ಸಂಘ, ಕೆಎನ್ಆರ್ ಐ , ದುಬೈ ಕರ್ನಾಟಕ ಸಂಘ , ಸಅದಿಯ್ಯ, ಕೆಐಸಿ , ಮೂಳೂರ್ ಅಸೋಸಿಯೇಷನ್, ಕುಂದಾಪುರ ಅಸೋಸಿಯೇಷನ್,  ತವಕ್ಕಲ್ ಓವರ್ಸೀಸ್, ಕಣ್ಣಂಗಾರ್ ಅಸೋಸಿಯೇಷನ್  ಅಲ ಕಮರ್ ಅಸೋಸಿಯೇಷನ್, ಆಲ್ ಇಸ್ಲಾಮಿಯ್ಯ, ಬಿಲ್ಲವಾಸ್ ದುಬೈ, ಮ್ಯಾಂಗಲೋರ್ ಕೊಂಕಣ್ಸ್,  ಬಂಟ್ಸ್ ಅಸೋಸಿಯೇಷನ್ ಮೊದಲ್ಲದ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಸಿಎಫ್ ಇಫ್ತಾರ್ ಕಮಿಟಿ ಚಯರ್ಮ್ಯಾನ್  ಅಬ್ದುಲ್ ಲತೀಫ್ ಮುಲ್ಕಿ, ರಫೀಕ್ ಹುಸೈನ್, ಅಮೀರುದ್ದೀನ್ ಎಸ್ ಐ , ಅಬ್ದುಲ್ ಲತೀಫ್ ಪುತ್ತೂರು, ಅಬ್ದುಲ್ ರಹ್ಮಾನ್ ಸಜಿಪ, ಅಸ್ಲಾಂ ಕಾರಾಜೆ, ಉಸ್ಮಾನ್ ಮೂಳೂರು, ರಿಯಾಝ್ ಸುರತ್ಕಲ್, ಅಮೀರ್ ಹಳೆಯಂಗಡಿ, ಇಕ್ಬಾಲ್ ಮೇಫ, ಸುಲೈಮಾನ್ ಮೂಳೂರು, ರಫೀಕ್ ಮುಲ್ಕಿ, ಸತ್ತಿಕಲ್ ಅಶ್ರಫ್ ಮತ್ತು ಉಳ್ಳಾಲ ಸ್ವಯಂ ಸೇವಕರ ತಂಡ  ಕಾರ್ಯಕ್ರಮದಲ್ಲಿ ಸಹಕರಿಸಿದ್ದವು.

ಬಿಸಿಎಫ್ ಉಪಾಧ್ಯಕ್ಷ ಅಮೀರುದ್ದೀನ್ ಎಸ್ ಐ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)