varthabharthi

ಕರಾವಳಿ

ನಕಲಿ ಮತದಾನ

ಮೇ 19ಕ್ಕೆ ಕಾಸರಗೋಡು ಕ್ಷೇತ್ರದ ನಾಲ್ಕು ಮತಗಟ್ಟೆಗಳಲ್ಲಿ ಮರುಮತದಾನ

ವಾರ್ತಾ ಭಾರತಿ : 16 May, 2019

ಕಾಸರಗೋಡು : ನಕಲಿ ಮತದಾನ ನಡೆದ ಕಾಸರಗೋಡು ಲೋಕಸಭಾ ಕ್ಷೇತ್ರದ ನಾಲ್ಕು ಮತಗಟ್ಟೆಗಳಲ್ಲಿ  ಮೇ 19 ರಂದು ಮರುಮತದಾನ  ನಡೆಸಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ.

ಕಲ್ಯಾಶ್ಯೆರಿಯ  19ನೇ ಪಿಲಾತ್ತರ,  69 ನೇ ಮತಗಟ್ಟೆ, 70ನೇ ಮತಗಟ್ಟೆ, ಕಣ್ಣೂರು ತಳಿಪರಂಬ 122ನೇ ಮತಗಟ್ಟೆಯಲ್ಲಿ ಮೇ 19ರಂದು ಮರು ಮತದಾನ ನಡೆಯಲಿದೆ.

ಈ ನಾಲ್ಕು ಮತಗಟ್ಟೆಗಳಲ್ಲಿ ಎ. 23ರಂದು ನಡೆದ ಮತದಾನವನ್ನು ಚುನಾವಣಾ ಆಯೋಗ ರದ್ದುಗೊಳಿಸಿತ್ತು. 19ರಂದು ಬೆಳಗ್ಗೆ 7 ರಿಂದ ಸಂಜೆ 4 ರ ತನಕ ಮತದಾನ ನಡೆಯಲಿದೆ.

ಈ ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದಿರುವುದು ಚುನಾವಣಾ ಆಯೋಗ ಪತ್ತೆಹಚ್ಚಿತ್ತು.  ಪಿಲಾತ್ತರ 19 ನೇ ಮತಗಟ್ಟೆಯಲ್ಲಿ ಮೂವರು ಸಿಪಿಎಂ ಕಾರ್ಯಕರ್ತರು ನಕಲಿ ಮತದಾನ ಮಾಡುತ್ತಿರುವ ದೃಶ್ಯ ಸಹಿತ ಕಾಂಗ್ರೆಸ್  ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಬಳಿಕ ಉಳಿದ ಮೂರು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದಿರುವ ಬಗ್ಗೆ ಸಿಪಿಎಂ ಕೂಡ ಆಯೋಗಕ್ಕೆ ದೂರು ನೀಡಿತ್ತು.

ಬಳಿಕ ದೃಶ್ಯಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗ ಈ ನಾಲ್ಕು ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲು ಆಯೋಗ ತೀರ್ಮಾನಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)