ಬಾಲಕಿಯ ಅತ್ಯಾಚಾರ: ಆರೋಪಿ ಸೆರೆ
ಕಡಬ, ಮೇ.16. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಲಾತ್ಕಾರದಿಂದ ಅತ್ಯಾಚಾರಗೈದುದರಿಂದ ಬಾಲಕಿ ಇದೀಗ ಗರ್ಭಿಣಿಯಾದ ಘಟನೆ ಕಡಬ ಠಾಣೆ ವ್ಯಾಪ್ತಿಯ ರಾಮಕುಂಜದಿಂದ ತಡವಾಗಿ ಬೆಳಕಿಗೆ ಬಂದಿದೆ.
ಕಡಬ ತಾಲೂಕು ರಾಮಕುಂಜ ಗ್ರಾಮದ ಮಾರಂಗ ನಿವಾಸಿ ರಮೇಶ (20) ಎಂಬಾತ ಕಡಬ ಠಾಣಾ ವ್ಯಾಪ್ತಿಯ13 ರ ಹರೆಯದ ಬಾಲಕಿಯ ಮೇಲೆ ಸುಮಾರು ಎರಡು ತಿಂಗಳ ಹಿಂದೆ ಅತ್ಯಾಚಾರ ಎಸಗಿ, ಈ ವಿಚಾರವನ್ನು ಹೊರಗಡೆ ತಿಳಿಸದಂತೆ ಜೀವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಬಾಲಕಿಯು ಇದೀಗ ಎರಡು ತಿಂಗಳ ಗರ್ಭಿಣಿಯಾಗಿದ್ದು, ಮನೆಯವರಿಗೆ ಅತ್ಯಾಚಾರಗೈದ ವಿಚಾರ ತಿಳಿದುಬಂದಿದೆ.
ಈ ಬಗ್ಗೆ ಆರೋಪಿ ರಮೇಶ್ ವಿರುದ್ಧ ಬಾಲಕಿ ನೀಡಿದ ದೂರಿನಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Next Story