varthabharthi

ಕರಾವಳಿ

ಕಾರ್ಯಾಡಿ: ಎಂ.ಫ್ರೆಂಡ್ಸ್ ಮಂಗಳೂರು ವತಿಯಿಂದ ಇಫ್ತಾರ್ ಕೂಟ

ವಾರ್ತಾ ಭಾರತಿ : 16 May, 2019

ಮಂಗಳೂರು: ಎಂ. ಫ್ರೆಂಡ್ಸ್ ಮಂಗಳೂರು ಇದರ ವತಿಯಿಂದ ಕುಳ ಗ್ರಾಮದ ಕಾರ್ಯಾಡಿ ಜನತಾ ಕಾಲನಿ ನಿವಾಸಿಗಳೊಂದಿಗೆ ಕಾರ್ಯಾಡಿ ತಾಜುಲ್ ಉಲಮಾ ಮಸೀದಿ ವಠಾರದಲ್ಲಿ ಗುರುವಾರ ಇಫ್ತಾರ್ ಕೂಟ ನಡೆಯಿತು.

ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಗೋಳ್ತಮಜಲು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಹಮ್ಮದ್ ಸಫ್ವಾನ್ ಜೌಹರಿ ಅರಳ ಅವರು ರಮಝಾನ್ ಸಂದೇಶ ನೀಡಿದರು. ಕಾರ್ಯಾಡಿ ಮಸೀದಿ ಖತೀಬ್ ಸಲೀಮ್ ಸಅದಿ ದುವಾ ನೆರವೇರಿಸಿದರು. ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಹಾಗೂ ಮಸೀದಿ ಅಧ್ಯಕ್ಷ ಉಸ್ಮಾನ್ ಕಾರ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂ.ಫ್ರೆಂಡ್ಸ್ ಕೋಶಾಧಿಕಾರಿ ಅಬೂಬಕರ್ ನೋಟರಿ ವಿಟ್ಲ ಸ್ವಾಗತಿಸಿದರು. ಟ್ರಸ್ಟಿ ಅಡ್ವಕೇಟ್ ಶಾಕಿರ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಡಿ.ಎಂ. ರಶೀದ್ ಉಕ್ಕುಡ ವಂದಿಸಿದರು.

ಸಮಾರಂಭದಲ್ಲಿ ಕಾರ್ಯಾಡಿ ಜನತಾ ಕಾಲನಿಯ ಬಡವರಿಗೆ ರಮಝಾನ್ ರೇಶನ್ ಕಿಟ್ ಹಾಗೂ ಮಸೀದಿಯ ಕೊಳವೆಬಾವಿಗೆ ಧನಸಹಾಯ ವಿತರಿಸಲಾಯಿತು.

ಎಂ.ಫ್ರೆಂಡ್ಸ್ ಟ್ರಸ್ಟಿಗಳಾದ ಟಿ.ಕೆ. ಮಹಮ್ಮದ್ ಟೋಪ್ಕೋ ಜ್ಯುವೆಲ್ಲರಿ, ಕೆ.ಪಿ.ಸಾದಿಕ್ ಪುತ್ತೂರು, ಮಹಮ್ಮದ್ ರಿಯಾಝ್ ಪುತ್ತೂರು, ಇರ್ಶಾದ್ ಮಂಗಳೂರು, ಮುಸ್ತಫಾ ಅಹ್ಮದ್ ಗೋಳ್ತಮಜಲು, ಆರಿಫ್ ಬೆಳ್ಳಾರೆ, ವಿ.ಎಚ್.ಅಶ್ರಫ್ ವಿಟ್ಲ, ಝುಬೈರ್ ವಿಟ್ಲ, ಅನ್ಸಾರ್ ಬೆಳ್ಳಾರೆ, ಹಾರಿಸ್ ಕಾನತ್ತಡ್ಕ, ಅಬ್ಬಾಸ್ ಕಲ್ಲಂಗಳ, ಕಲಂದರ್ ಪರ್ತಿಪ್ಪಾಡಿ, ಇರ್ಶಾದ್ ವೇಣೂರು, ರಫೀಕ್ ನೆಟ್ಲ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)