varthabharthi

ಕರಾವಳಿ

ಮೇ 19: ತೀಸ್ತಾ ಸೆಟಲ್ವಾಡ್‌ರ ‘ಸಂವಿಧಾನದ ಕಾಲಾಳು’ ಕೃತಿ ಬಿಡುಗಡೆ

ವಾರ್ತಾ ಭಾರತಿ : 16 May, 2019

ಮಂಗಳೂರು, ಮೇ 16: ಖ್ಯಾತ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ರ ‘ಫುಟ್ ಸೋಲ್ಜರ್ ಆಫ್ ದಿ ಕಾನ್ಸ್ಟಿಟ್ಯೂಷನ್’ ಕೃತಿಯನ್ನು ಕ್ರಿಯಾ ಮಾಧ್ಯಮ ಕನ್ನಡದಲ್ಲಿ ಹೊರತಂದಿದೆ. ಎಸ್.ಸತ್ಯಾರವರ ಭಾಷಾಂತರದಲ್ಲಿ ರೂಪುಗೊಂಡ ‘ಸಂವಿಧಾನದ ಕಾಲಾಳು’ ಕೃತಿಯು ಮೇ 19ರಂದು ಬೆಳಗ್ಗೆ 10:30ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ.

ಕಾಲೇಜಿನ ರಿಜಿಸ್ಟ್ರಾರ್ ಪ್ರೊ.ಎ.ಎಂ.ನರಹರಿ ಅಧ್ಯಕ್ಷತೆ ವಹಿಸಿ ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಬಗ್ಗೆ ಚಿಂತಕ ಜಿ.ರಾಜಶೇಖರ್ ಮಾತನಾಡಲಿದ್ದಾರೆ. ಕೃತಿ ಬಿಡುಗಡೆಯ ಜೊತೆಗೆ ‘ಜಾತ್ಯತೀತತೆಯ ರಕ್ಷಣೆಯಲ್ಲಿ ನಾವು-ನೀವು’ ವಿಷಯದ ಮೇಲೆ ವಿಚಾರ ಸಂಕಿರಣ ಜರುಗಲಿದ್ದು, ತೀಸ್ತಾ ಸೆಟಲ್ವಾಡ್ ಮತ್ತು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಪಾಲ್ಗೊಳ್ಳಲಿದ್ದಾರೆ.

ಕ್ರಿಯಾ ಮಾಧ್ಯಮ ಬೆಂಗಳೂರು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜ್ ಮತ್ತು ಸಮುದಾಯ ಮಂಗಳೂರು ಸಹಭಾಗಿತ್ವ ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)