varthabharthi

ಕರಾವಳಿ

ಮೇ 25: ದಾರುಲ್ ಕುರ್‌ಆನ್ ಕಾಲೇಜಿಗೆ ಪ್ರವೇಶ ಪರೀಕ್ಷೆ

ವಾರ್ತಾ ಭಾರತಿ : 16 May, 2019

ಮಂಗಳೂರು, ಮೇ 16: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ (ಕಿಸಾ)ಅಧೀನದಲ್ಲಿ ಎರಡು ವರ್ಷಗಳಿಂದ ಗಂಜಿಮಠ ನಾರ್ಲಪದವು ‘ವಾದಿಸ್ಸಲಾಮಃ’ ದಾರುಲ್ ಕುರ್‌ಆನ್ ಮಹಿಳಾ ಶರೀಅತ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಎರಡು ವರ್ಷದ ಉನ್ನತ ಧಾರ್ಮಿಕ ವಿದ್ಯಾಭ್ಯಾಸ ನೀಡಲಾಗುತ್ತಿದೆ.

2019ನೇ ಸಾಲಿನ ಕ್ಲಾಸಿಗೆ ಸೇರಲಿಚ್ಛಿಸುವ ವಿದ್ಯಾರ್ಥಿನಿಯರಿಗೆ ಪ್ರವೇಶನಾ ಪರೀಕ್ಷೆಯು ಮೇ 25ರಂದು ಬೆಳಗ್ಗೆ 10ರಿಂದ 12ಗಂಟೆಯ ತನಕ ವಾದಿಸ್ಸಲಾಮಃ ಕಾಲೇಜು ಕ್ಯಾಂಪಸಿನಲ್ಲಿ ಪ್ರಾಂಶುಪಾಲ ಹಾಜಿ ಕೆ.ಎಸ್.ಹೈದರ್ ದಾರಿಮಿಯ ನೇತೃತ್ವದಲ್ಲಿ ಪ್ರವೇಶನ ಪರೀಕ್ಷೆ ನಡೆಯಲಿದೆ.

ಮಾಹಿತಿಗಾಗಿ 9845404610 ಸಂಪರ್ಕಿಸಬಹುದು ಎಂದು ಕಾಲೇಜಿನ ಅಧ್ಯಕ್ಷ ಎ.ಎಚ್. ನೌಶಾದ್ ಹಾಜಿ ಸೂರಲ್ಪಾಡಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)