varthabharthi

ಕರಾವಳಿ

ಏಳು ಮಂದಿ ಗಾಯ

ಕಾಸರಗೋಡು : ನಿಯಂತ್ರಣ ತಪ್ಪಿದ ಜೀಪು ಪಲ್ಟಿ; ಇಬ್ಬರು ಮೃತ್ಯು

ವಾರ್ತಾ ಭಾರತಿ : 16 May, 2019

ಕಾಸರಗೋಡು : ನಿಯಂತ್ರಣ ತಪ್ಪಿದ ಜೀಪು ಪಲ್ಟಿಯಾದ ಪರಿಣಾಮ ಇಬ್ಬರು  ಮೃತಪಟ್ಟು, ಏಳು ಮಂದಿ  ಗಾಯಗೊಂಡ ಘಟನೆ  ಗುರುವಾರ ರಾತ್ರಿ ಚಟ್ಟಂಚಾಲ್ ನ ಕರಿಚ್ಚೇರಿಯಲ್ಲಿ  ನಡೆದಿದೆ.

ಮೃತರನ್ನು ಪಳ್ಳಂಜಿಯ  ಶಾರದಾ (68) ಮತ್ತು ಅವರ ಪುತ್ರ ಸುಧೀರ್ ( 42) ಎಂದು ಗುರುತಿಸಲಾಗಿದೆ.

ಸುಧೀರ್ ರ  ಪುತ್ರ  ನಿರಂಜನ್  (7),  ಸಂಬಂಧಿಕ ಸುರೇಶ್ ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ . ಚಾಲಕ  ರಂಜಿತ್ (28) , ಚಂದ್ರಿಕಾ  ( 33), ಶಿವರಾಜ್ (15), ವಿಸ್ಮಯ ( 13) , ಸುನಿತಾ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗುರುವಾರ ರಾತ್ರಿ ಕರಿಚ್ಚೇರಿ ಇಳಿಜಾರು ರಸ್ತೆಯಲ್ಲಿ  ಚಾಲಕನ ನಿಯಂತ್ರಣ ತಪ್ಪಿದ ಜೀಪು ಮಗುಚಿ ಬಿದ್ದು ಈ  ಅವಘಡ ನಡೆದಿದೆ. 
ಪೊಯಿನಾಚಿ ಪರಂಬದಲ್ಲಿ  ನಡೆದ ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಅಪಘಾತ ನಡೆದಿದೆ. ಪರಿಸರವಾಸಿಗಳು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಆಸ್ಪತ್ರೆಗೆ ತಲಪಿಸಿದರೂ, ಇಬ್ಬರು ಮೃತಪಟ್ಟರು . 
ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)