varthabharthi

ಕರಾವಳಿ

ಮಂಗಳೂರು: ತೆರೆಸಾ ಚರ್ಚ್‌ನಲ್ಲಿ ನರ್ಸಿಂಗ್ ಡೇ ಆಚರಣೆ

ವಾರ್ತಾ ಭಾರತಿ : 16 May, 2019

ಮಂಗಳೂರು, ಮೇ 16: ನಗರದ ತೆರೆಸಾ ಚರ್ಚ್‌ನಲ್ಲಿ ನರ್ಸಿಂಗ್ ಡೇ ಆಚರಣೆ ಇತ್ತೀಚೆಗೆ ನಡೆಯಿತು. ಬೆಳಗ್ಗಿನ ಬಲಿಪೂಜೆ ಬಳಿಕ ಚರ್ಚ್‌ನ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ 12 ಮಂದಿ ದಾದಿಯರನ್ನು ಸನ್ಮಾನಿಸಲಾಯಿತು.

ಚರ್ಚ್‌ನ ಧರ್ಮಗುರು ಫಾ.ವಿನ್ಸೆಂಟ್ ವಿಕ್ಟರ್ ಮೆನೇಜಸ್ ಅವರು ದಾದಿಯರನ್ನು ಸನ್ಮಾನಿಸಿ, ‘ದಾದಿಯರ ಸೇವೆ ದೇವರ ಸೇವೆಗೆ ಸಮಾನ’ ಎಂದು ಹೇಳಿದರು.

ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಉಪ ನಿರ್ದೇಶಕ ಫಾ.ರೋಹಿತ್ ಡಿಕೋಸ್ತ, ಚರ್ಚ್‌ನ ಉಪಾಧ್ಯಕ್ಷ ರೋಶನ್ ಲುಸ್ರಾದೋ ಉಪಸ್ಥಿತರಿದ್ದರು.

ದಾದಿಯರಾದ ಹೆಲೆನ್ ಲೋಬೊ, ಲವಿನಾ ಪಿಂಟೊ, ರೂಪಾ ವನಿತಾ ತೋರಾಸ್, ಟ್ರೀಜಾ ಫೆರ್ನಾಂಡಿಸ್, ಸಬಿನಾ ಮೆನೇಜಸ್, ಪ್ಲಾವಿಯಾ ಅಲ್ವಾರಿಸ್, ಆ್ಯನೆಟ್ ವಾಸ, ಜೆಸಿಂತಾ ವಾಲ್ಟರ್, ಬಬಿತಾ ಪಿರೇರ, ಜೋಬಿತಾ, ಸಂಗೀತಾ ಕ್ರಾಸ್ತಾ, ಜ್ಯೋತಿ, ಅನಿತಾ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)