varthabharthi

ಗಲ್ಫ್ ಸುದ್ದಿ

ದುಬೈ: ಸಣ್ಣ ವಿಮಾನ ಪತನ; 4 ಸಾವು

ವಾರ್ತಾ ಭಾರತಿ : 17 May, 2019

ದುಬೈ, ಮೇ 17: ಬ್ರಿಟನ್‌ನಲ್ಲಿ ನೋಂದಾವಣೆಗೊಂಡಿರುವ ಹಗುರ ವಿಮಾನವೊಂದು ದುಬೈಯಲ್ಲಿ ಗುರುವಾರ ಪತನಗೊಂಡಿದ್ದು ಮೂವರು ಬ್ರಿಟನ್ ಪ್ರಜೆಗಳು ಮತ್ತು ಓರ್ವ ದಕ್ಷಿಣ ಆಫ್ರಿಕದ ಪ್ರಜೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಲ್ಕು ಆಸನಗಳ ವಿಮಾನವು ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ನೆಲಕ್ಕೆ ಅಪ್ಪಳಿಸಿತು ಹಾಗೂ ಅದರಲ್ಲಿದ್ದ ಎಲ್ಲ ನಾಲ್ಕು ಮಂದಿ ಮೃತಪಟ್ಟರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಧಿಕೃತ ಸುದ್ದಿ ಸಂಸ್ಥೆ ಡಬ್ಲುಎಎಂ ವರದಿ ಮಾಡಿದೆ.

ವಿಮಾನ ನಿಲ್ದಾಣದ ಭೂ ಸಂಚಾರ ವ್ಯವಸ್ಥೆಯ ವೌಲ್ಯಮಾಪನ ಮಾಡುತ್ತಿದ್ದ ವೇಳೆ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿದ ದೋಷದಿಂದಾಗಿ ಅಪಘಾತ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)