varthabharthiಮಾಹಿತಿ - ಮಾರ್ಗದರ್ಶನ

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 18 May, 2019

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):
ಲೆನೊವೊ ಸ್ಮಾರ್ಟರ್ ಟೆಕ್ನಾಲಜಿ ಫಾರ್ ಆಲ್ ವನ್ ಯಂಗ್ ವರ್ಲ್ಡ್ ಸ್ಕಾಲರ್‌ಶಿಪ್, 2019

ವಿವರ: ಬ್ರಿಟನ್‌ನಲ್ಲಿ ನಡೆಯಲಿರುವ ‘ವನ್ ಯಂಗ್ ವರ್ಲ್ಡ್’ ಸಮ್ಮೇಳನದಲ್ಲಿ ಪಾಲ್ಗೊಳ್ಳಲು (ಎಲ್ಲಾ ವೆಚ್ಚ ಭರಿಸಲಾಗು ವುದು)ಭಾರತೀಯ ಯುವ ವಿದ್ಯಾರ್ಥಿ ಗಳಿಂದ ಲೆನೊವೊ ಅರ್ಜಿ ಆಹ್ವಾನಿಸಿದೆ.‘ ಸ್ಟೆಮ್’ ಪಠ್ಯಕ್ರಮದಲ್ಲಿ ನವೀನ ಸಂಶೋಧನೆ ನಡೆಸಲು ಆಸಕ್ತ ವಿದ್ಯಾರ್ಥಿಗಳಿಗೆ ನೆರವಾ ಗುವ ಉದ್ದೇಶದಿಂದ ಈ ಸ್ಕಾಲರ್‌ಶಿಪ್ ನೀಡಲಾಗುವುದು.
ಅರ್ಹತೆ: ಸಾಮಾಜಿಕ ಪರಿಣಾಮ ಬೀರುವ ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಇರುವ 18ರಿಂದ 30 ವರ್ಷದೊಳಗಿನ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಲಂಡನ್‌ನಲ್ಲಿ ನಡೆಯಲಿರುವ ‘ವನ್ ಯಂಗ್ ವರ್ಲ್ಡ್ ಸಮ್ಮೇಳನ 2019ರಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ. ವಾಸ್ತವ್ಯ, ಊಟ, ಪ್ರಯಾಣದ ವೆಚ್ಚದ ಜೊತೆಗೆ ಸಮ್ಮೇಳನಕ್ಕೆ ಅಗತ್ಯವಾದ ವಸ್ತುಗಳನ್ನು ಒದಗಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 20, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/OYW2

**************
ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
 ಎಲ್‌ಸ್ಯಾಟ್ ಇಂಡಿಯಾ ಲಾ ಸ್ಕಾಲರ್‌ಶಿಪ್, 2019

ವಿವರ: ಭಾರತದ ಪ್ರಮುಖ ಕಾನೂನು ಅಧ್ಯಯನ ಸಂಸ್ಥೆಯಲ್ಲಿ ಕಾನೂನು ಅಧ್ಯಯನ ನಡೆಸಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಂದ ಲಾ ಸ್ಕೂಲ್ ಅಡ್ಮಿಷನ್ ಕೌನ್ಸಿಲ್(ಎಲ್‌ಎಸ್‌ಎಸಿ) ಅರ್ಜಿ ಆಹ್ವಾನಿಸಿದೆ. ಕಾನೂನು ವಿಷಯದಲ್ಲಿ ಉನ್ನತ ಅಧ್ಯಯನ ನಡೆಸಲು ಆರ್ಥಿಕ ನೆರವು ಒದಗಿಸಲಾಗುವುದು.
ಅರ್ಹತೆ: 2018-19ರಲ್ಲಿ 12ನೇ ತರಗತಿ ತೇರ್ಗಡೆಯಾಗಿರುವ , 2019ರಲ್ಲಿ ಎಲ್‌ಸ್ಯಾಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಎಲ್‌ಸ್ಯಾಟ್ ಸಹ ಕಾಲೇಜುಗಳಲ್ಲಿ 2019ರಲ್ಲಿ ಆರಂಭವಾಗುವ ಐದು ವರ್ಷಗಳ ಕಾನೂನು ಪದವಿಗೆ ಅರ್ಜಿ ಸಲ್ಲಿಸಿರಬೇಕು.
ನೆರವು: ಎಲ್‌ಸ್ಯಾಟ್ ಅಂಕಗಳ ಆಧಾರದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗುವುದು ಹಾಗೂ ಪ್ರಥಮ ವರ್ಷದ ಕಾನೂನು ಅಧ್ಯಯನದ ಅಧ್ಯಯನ ಶುಲ್ಕ ಹಾಗೂ ವಾಸ್ತವ್ಯ ಶುಲ್ಕದ ವೆಚ್ಚವಾಗಿ 6 ಲಕ್ಷ ರೂ.ವರೆಗಿನ ಸ್ಕಾಲರ್‌ಶಿಪ್ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 20, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/LIL2

***********

ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
 ಬಾಂಡ್ ವಿವಿ ಇಂಡಿಯಾ ಎಕ್ಸಲೆನ್ಸ್ ಸ್ಕಾಲರ್‌ಶಿಪ್, 2019

ವಿವರ: ಆಸ್ಟ್ರೇಲಿಯಾದ ಬಾಂಡ್ ವಿವಿಯಲ್ಲಿ ಸ್ಕಾಲರ್‌ಶಿಪ್ ಪಡೆದು ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ನಡೆಸಲು ಭಾರತೀಯ ವಿದ್ಯಾರ್ಥಿಗಳಿಂದ ಬಾಂಡ್ ವಿವಿ ಅರ್ಜಿ ಆಹ್ವಾನಿಸಿದೆ.
ಅರ್ಹತೆ: ಆಸ್ಟ್ರೇಲಿಯಾದ ಬಾಂಡ್ ವಿವಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ನಡೆಸಲು ಅಂಗೀಕಾರ ಪಡೆದಿರುವ, ಅತ್ಯುತ್ತಮ ಶೈಕ್ಷಣಿಕ ಸಾಮರ್ಥ್ಯ ತೋರಿರುವ ಭಾರತೀಯ ವಿದ್ಯಾರ್ಥಿಗಳು ಅರ್ಹರು.
ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕವಾಗಿ 10,000 ಆಸ್ಟ್ರೇಲಿಯನ್ ಡಾಲರ್ ಮೊತ್ತವನ್ನು ನೀಡಲಾಗುವುದು(ಎರಡು ಸಮಾನ ಕಂತುಗಳಲ್ಲಿ ಪಾವತಿಸಲಾಗುವುದು).
 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 24, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/BUI3

************
ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
ಸಿಎಂಆರ್ ಜೂನಿಯರ್ ರಿಸರ್ಚ್ ಫೆಲೋಶಿಪ್ 2019

 ವಿವರ: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾ ಅಧ್ಯಯನ ನಡೆಸಬಯಸುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾಸಿಕ ಸ್ಟೈಪೆಂಡ್ ಹಾಗೂ ಇತರ ಸೌಲಭ್ಯದ ಸಹಿತ ನೀಡುವ ಫೆಲೋಶಿಪ್.
ಅರ್ಹತೆ: ಎಂಎಸ್ಸಿ/ಎಂಎ ಅಥವಾ ತತ್ಸಮಾನ ಪದವಿ (ಸಾಮಾನ್ಯ/ಒಬಿಸಿ ವರ್ಗದವರಿಗೆ ಶೇ.55), ಎಸ್ಸಿ/ಎಸ್ಟಿ/ಪಿಎಚ್/ವಿಎಚ್ ಅಭ್ಯರ್ಥಿಗಳಿಗೆ ಶೇ.50 ಅಂಕ)ಗಳಿಸಿದವರು ಅರ್ಹರು. 2019ರ ಸೆಪ್ಟ್ಟಂಬರ್ 30ಕ್ಕೆ 28 ವರ್ಷ ಮೀರಿರಬಾರದು. ಮೀಸಲಾತಿ ವಿಭಾಗದ ವಿದ್ಯಾರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ.
 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ 25,000 ರೂ. ಮಾಸಿಕ ಸ್ಟೈಪೆಂಡ್, ಅನಿಶ್ಚಿತ ನಿಧಿಯಾಗಿ 20,000 ರೂ, ಹಾಗೂ ಸರಕಾರದ ನಿಯಮದ ಅನುಸಾರ ಮನೆಬಾಡಿಗೆ ಭತ್ತೆ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 27, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IJR9

*************
ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಜಾಯ್ನಿಂಗ್ ಹ್ಯಾಂಡ್ಸ್ ಹೈಯರ್ ಎಜುಕೇಶನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2019- 2020

ವಿವರ: ಜಾಯ್ನಿಂಗ್ ಹ್ಯಾಂಡ್ ಎಂಬ ಭಾರತದ ಸರಕಾರೇತರ ಸಂಸ್ಥೆಯು ಆರ್ಥಿಕವಾಗಿ ದುರ್ಬಲ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚದ ನಿರ್ವಹಣೆಗಾಗಿ ನೀಡುವ ಸ್ಕಾಲರ್‌ಶಿಪ್. ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ನೆರವಾಗುವ ಉದ್ದೇಶದ ಸ್ಕಾಲರ್‌ಶಿಪ್.
ಅರ್ಹತೆ: 12ನೇ ತರಗತಿ ಅಥವಾ 12ನೇ ತರಗತಿ ತೇರ್ಗಡೆ ಹಂತದಲ್ಲಿರುವ ಅಥವಾ ಪದವಿ ವಿದ್ಯಾರ್ಥಿಗಳು (ಶೇ.60 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು)ಅರ್ಜಿ ಸಲ್ಲಿಸಬಹುದು. ದಿಲ್ಲಿ, ಬೆಂಗಳೂರು ಅಥವಾ ಪುಣೆಯಲ್ಲಿ ವಾಸಿಸುತ್ತಿರಬೇಕು .
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕ, ಪುಸ್ತಕ, ಹಾಸ್ಟೆಲ್ ವೆಚ್ಚ, ವಾಹನ ಭತ್ತೆ ನೀಡಲಾಗುವುದು..
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 30, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/JHH3

**************
ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧಾರಿತ):
ಡಾ ಬಿ.ಆರ್. ಶೆಟ್ಟಿ ಮತ್ತು ಸಿ.ಆರ್. ಶೆಟ್ಟಿ ಸ್ಕಾಲರ್‌ಶಿಪ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್

ವಿವರ: ಪರ್ಫ್ಯೂಷನ್ ಟೆಕ್ನಾಲಜಿ, ರೇಡಿಯೊ ಥೆರಪಿ, ನರ್ಸಿಂಗ್, ಡಯಾಲಿಸಿಸ್ ಮುಂತಾದ ವಿವಿಧ ವೈದ್ಯಕೀಯ ವಿಷಯಗಳಲ್ಲಿ ಅಧ್ಯಯನ ನಡೆಸಲು ಆಸಕ್ತಿ ಇರುವ ಬಿಎಸ್ಸಿ ಪ್ರಥಮ ಅಥವಾ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಗೂ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಡಾ ಬಿ.ಆರ್. ಶೆಟ್ಟಿ ಮತ್ತು ಸಿಆರ್ ಶೆಟ್ಟಿ ಪ್ರತಿಷ್ಠಾನ ನೀಡುವ ಸ್ಕಾಲರ್‌ಶಿಪ್.
ಅರ್ಹತೆ: ಕರ್ನಾಟಕದ ಉಡುಪಿ ನಿವಾಸಿಯಾಗಿರಬೇಕು, ಪಿಯುಸಿಯಲ್ಲಿ ಕನಿಷ್ಠ ಶೇ.60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು, ಕುಟುಂಬದ ವಾರ್ಷಿಕ ವರಮಾನ 4 ಲಕ್ಷ ರೂ.ಗಿಂತ ಹೆಚ್ಚಿರಬಾರದು. ವಿಭಿನ್ನ ಚೇತನರು, ಏಕ ಪೋಷಕರು ಇರುವವರು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕ, ಪುಸ್ತಕ, ಹಾಸ್ಟೆಲ್ ವೆಚ್ಚ, ಒಬ್ಬರಿಗಿಂತ ಹೆಚ್ಚು ಸಹೋದರರು ಇರುವವರು, ಕುಟುಂಬದ ಸದಸ್ಯರು ಕ್ಯಾನ್ಸರ್, ಎಚ್‌ಐವಿ ಇತ್ಯಾದಿ ಕಾಯಿಲೆಗಳಿಂದ ಬಳಲುತ್ತಿದ್ದರೆ, ಬೀಡಿ ಕಾರ್ಮಿಕರ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ವಾಹನ ಭತ್ತೆ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 30, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/DB1

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)