varthabharthi

ಸಿನಿಮಾ

ಮತದಾನೋತ್ತರ ಸಮೀಕ್ಷೆ: ಐಶ್ವರ್ಯ ರೈ ಬಗ್ಗೆ ಕೀಳುಮಟ್ಟದ ಟ್ವೀಟ್ ಮಾಡಿದ ವಿವೇಕ್ ಒಬೆರಾಯ್ ಗೆ ಟ್ವಿಟರಿಗರ ಮಂಗಳಾರತಿ

ವಾರ್ತಾ ಭಾರತಿ : 20 May, 2019

ಹೊಸದಿಲ್ಲಿ, ಮೇ 20: ದೇಶದೆಲ್ಲೆಡೆ ಮತದಾನೋತ್ತರ ಸಮೀಕ್ಷೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಇದೇ ವಿಚಾರವಾಗಿ ಕೀಳುಮಟ್ಟದ ಟ್ವೀಟ್ ಮಾಡಿದ ನಟ ವಿವೇಕ್ ಒಬೆರಾಯ್ ಗೆ ಟ್ವಿಟರಿಗರು ಮಂಗಳಾರತಿ ಮಾಡಿದ್ದಾರೆ.

2019ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ್ದ ವಿವೇಕ್ ಒಬೆರಾಯ್, ಐಶ್ವರ್ಯ ರೈಯವರು ಸಲ್ಮಾನ್ ಖಾನ್, ತನ್ನೊಂದಿಗೆ ಮತ್ತು ಅಭಿಷೇಕ್ ಬಚ್ಚನ್ ಜೊತೆಗಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಈ ಕೀಳುಮಟ್ಟದ ಪೋಸ್ಟ್ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ.

“ಇದು ಕೆಟ್ಟ ಅಭಿರುಚಿಯಿಂದ ಕೂಡಿದೆ. ಒಬ್ಬರ ವೈಯಕ್ತಿಕ ಜೀವನವನ್ನು ಇಲ್ಲಿ ಚರ್ಚಿಸಬಾರದು.. ಇಲ್ಲಿ ತಂದೆ/ತಾಯಿ/ಸಹೋದರ/ಸಹೋದರಿ .. ಎಂಬ ಸಂಬಂಧಗಳಿರುವ ನಾಲ್ಕು ವ್ಯಕ್ತಿಗಳಿದ್ದಾರೆ. ನಾಚಿಕೆಯಾಗಬೇಕು…” ಎಂದು ಸುಷಾಂತ್ ಕುಮಾರ್ ಎಂಬವರು ಟ್ವೀಟ್ ಮಾಡಿದ್ದಾರೆ.

ಇನ್ನೂ ಕೆಲವು ಟ್ವೀಟ್ ಗಳ ಸ್ಕ್ರೀನ್ ಶಾಟ್ ಗಳು ಈ ಕೆಳಗಿವೆ..

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)