ಪಾಕಿಸ್ತಾನಿ ಬೋಟ್ನಿಂದ 600 ಕೋ.ರೂ ಹೆರೊಯಿನ್ ವಶಪಡಿಸಿಕೊಂಡ ಕರಾವಳಿ ರಕ್ಷಣಾ ಪಡೆ
ಮುಂಬೈ, ಮೇ.21: ಮಂಗಳವಾರ ಮುಂಜಾನೆ ಕಾರ್ಯಾಚರಣೆ ನಡೆಸಿದ ಭಾರತೀಯ ಕರಾವಳಿ ರಕ್ಷಣಾ ಪಡೆ ಪಾಕಿಸ್ತಾನಕ್ಕೆ ಸೇರಿದ ಮೀನುಗಾರಿಕಾ ಬೋಟ್ನಲ್ಲಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ 600 ಕೋ.ರೂ. ಬೆಲೆಬಾಳುವ 200 ಕೆ.ಜಿ ಹೆರೊಯಿನ್ ವಶಪಡಿಸಿಕೊಂಡಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕರಾವಳಿ ರಕ್ಷಣಾಪಡೆಯ ಸಿಬ್ಬಂದಿ ಪಾಕಿಸ್ತಾನಿ ಬೋಟ್ ಅಲ್ ಮದೀನವನ್ನು ಸುತ್ತುವರಿದು ಅದರಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಕರಾವಳಿ ರಕ್ಷಣಾ ಪಡೆ ವಕ್ತಾರ ತಿಳಿಸಿದ್ದಾರೆ.
ಪಾಕಿಸ್ತಾನಿ ಬೋಟ್ನಿಂದ ಹೆರೋಯಿನ್ ಪಡೆದುಕೊಳ್ಳಲು ಕಾಯುತ್ತಿದ್ದ ಭಾರತೀಯ ಮೀನುಗಾರಿಕಾ ಬೋಟ್ನಲ್ಲಿದ್ದ 13 ಮಂದಿಯನ್ನೂ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story