varthabharthi

ಗಲ್ಫ್ ಸುದ್ದಿ

ದುಬೈ: ಬಿಸಿಎಫ್ ವತಿಯಿಂದ ಝಫರುಲ್ಲಾ ಖಾನ್ ಗೆ ಸನ್ಮಾನ

ವಾರ್ತಾ ಭಾರತಿ : 21 May, 2019
ಎಂ.ಇ. ಮೂಳೂರ್

ದುಬೈ: ಬ್ಯಾರೀಸ್ ಕಲ್ಚರಲ್ ಫೋರಂ ಇದರ ಪ್ರಧಾನ ಗೌರವ ಸಲಹೆಗಾರರೂ,  ಯುಎಇಯ ಪ್ರಖ್ಯಾತ ಅನಿವಾಸಿ ಕನ್ನಡಿಗ ಉದ್ಯಮಿಯೂ, ಹಲವಾರು ಅನಿವಾಸಿ ಕನ್ನಡ ಪರ ಸಂಸ್ಥೆಗಳ ಪೋಷಕರೂ, ಸಮಾಜ ಸೇವಕರೂ ಆದ ಝಫರುಲ್ಲಾ ಖಾನ್ ಅವರು ಇತ್ತೀಚಿಗೆ ಕರ್ನಾಟಕ ಅಲ್ಪಸಂಖ್ಯಾತ ನಿಗಮದ ಚಯರ್ಮನ್ ಆಗಿ ಆಯ್ಕೆಯಾಗಿದ್ದು, ಆ ಪ್ರಯುಕ್ತ ಬಿಸಿಎಫ್ ದುಬೈ ವತಿಯಿಂದ ಅವರನ್ನು 'ಬಿಸಿಎಫ್ ಇಫ್ತಾರ್ ಕೂಟ 2019' ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಬಿಸಿಫ್ ಅಧ್ಯಕ್ಷ ಡಾ. ಬಿಕೆ ಯೂಸುಫ್,  ಅತಿಥಿಗಳಾದ ಉದ್ಯಮಿ ರಿಝ್ವಾನುಲ್ಲಾ ಖಾನ್, ಶಬ್ಬೀರ್ ಸೈಫುದ್ದೀನ್, ಯುಎಇಯ ಕನ್ನಡ  ಸಂಘಗಳ, ವಿದ್ಯಾ ಸಂಸ್ಥೆಗಳ ಅಧ್ಯಕ್ಷರುಗಳು, ಪ್ರತಿನಿಧಿಗಳು ಪಾಲ್ಗೊಂಡಿದ್ದ ವೇದಿಕೆಯಲ್ಲಿ ಝಫರುಲ್ಲಾ ಖಾನ್ ರನ್ನು ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಅವರು ಝಫರುಲ್ಲಾ ಖಾನ್ ತಾನು ತನ್ನ ಸುಧೀರ್ಘ ಸಮಾಜ ಸೇವಾ ಜೀವನದಲ್ಲಿ ಎಂದೂ ತನ್ನ ಸ್ವಾರ್ಥತೆ ಯನ್ನಾಗಲೀ, ವೈಯಕ್ತಿಕ ಲಾಭವನ್ನಾಗಲೀ ಪರಿಗಣಿಸದೆ ಯಾವುದೇ ಜಾತಿ, ಪಂಗಡ, ಕ್ಷೇತ್ರ ಎಂಬ ನೆಲೆಯಲ್ಲಿ ತಾರತಮ್ಯ ತೋರದೆ ನಾನೋರ್ವ ಅಪ್ಪಟ ಭಾರತೀಯ,ಕನ್ನಡಿಗನಾಗಿದ್ದು, ಭಾರತೀಯ ಮುಸಲ್ಮಾನ ತಾಯಿ ನಾಡಿನ ಮೇಲೆ ಪ್ರೇಮ, ಬದ್ಧತೆ ಇಲ್ಲದವನು ಓರ್ವ ಸಂಪೂರ್ಣ ಮುಸಲ್ಮಾನಾಗಲು ಸಾಧ್ಯವಿಲ್ಲ ಎಂದು ನನ್ನ ಇಸ್ಲಾಮ್ ಸಾರಿದ ದೇಶಪ್ರೇಮದ ಸಂದೇಶವನ್ನು ಸದಾ ಜೀವನದಲ್ಲಿ ಅಳವಡಿಸಿಕೊಂಡು ಸೇವೆ ಮಾಡುವುದು ನನ್ನ ಧರ್ಮ ಎಂದು ನಂಬಿದವನಾಗಿದ್ದೇನೆ ಎಂದು ಹೇಳಿದರು.

ಈ ಸಂದರ್ಭ ಹಲವು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)