varthabharthi

ಅಂತಾರಾಷ್ಟ್ರೀಯ

ಬೋಯಿಂಗ್ ವಿರುದ್ಧ 1,882 ಕೋಟಿ ರೂ. ಪರಿಹಾರ ಕೋರಿ ಮೊಕದ್ದಮೆ

ವಾರ್ತಾ ಭಾರತಿ : 21 May, 2019

ಪ್ಯಾರಿಸ್, ಮೇ 21: ಇಥಿಯೋಪಿಯನ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಫ್ರಾನ್ಸ್‌ನ ಪ್ರಯಾಣಿಕರೊಬ್ಬರ ಪತ್ನಿ, ಬೋಯಿಂಗ್ ಕಂಪೆನಿಯಿಂದ ಕನಿಷ್ಠ 276 ಮಿಲಿಯ ಡಾಲರ್ (ಸುಮಾರು 1,882 ಕೋಟಿ ರೂಪಾಯಿ) ಪರಿಹಾರ ಕೋರಿ ಅಮೆರಿಕದ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬ ಸಮೀಪ ವಿಮಾನ ಪತನಗೊಂಡ ಅಪಘಾತದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 157 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

737 ವಿಮಾನವು ಸ್ಥಗಿತಗೊಳ್ಳುವುದರಿಂದ ತಡೆಯುವ ಉದ್ದೇಶದ ಸಾಫ್ಟ್‌ವೇರ್ ಒಡ್ಡಬಹುದಾದ ಅಪಾಯಗಳ ಬಗ್ಗೆ ಬೋಯಿಂಗ್ ಕಂಪೆನಿಯು ಪೈಲಟ್‌ಗಳಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)