varthabharthi

ಕ್ರೀಡೆ

ಹಣಕ್ಕಾಗಿ ಅಕ್ಕನಿಂದ ಬ್ಲಾಕ್‌ಮೇಲ್: ದ್ಯುತಿ ಚಂದ್ ಆರೋಪ

ವಾರ್ತಾ ಭಾರತಿ : 21 May, 2019

ಭುವನೇಶ್ವರ, ಮೇ 21: ತನ್ನ ಕುಟುಂಬದ ಹುಡುಗಿಯೊಂದಿಗೆ ಸಲಿಂಗ ಸಂಬಂಧ ಹೊಂದಿರುವುದಾಗಿ ಹೇಳಿಕೆ ನೀಡಿ ಸಮಸ್ಯೆಯಲ್ಲಿ ಸಿಲುಕಿಕೊಂಡಿರುವ ಓಟಗಾರ್ತಿ ದ್ಯುತಿ ಚಂದ್ ಇದೀಗ ತನ್ನ ಅಕ್ಕ 25 ಲಕ್ಷ ರೂ. ಗೆ ಬ್ಲಾಕ್‌ಮೇಲ್ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.

25 ಲಕ್ಷ ರೂ. ಹಣ ನೀಡದಿದ್ದರೆ ನೀನು ಹಳ್ಳಿಯ ಹುಡುಗಿಯೊಂದಿಗೆ ಕಳೆದ ಮೂರು ವರ್ಷಗಳಿಂದ ಹೊಂದಿದ್ದ ಸಲಿಂಗ ಸಂಬಂಧವನ್ನು ಬಹಿರಂಗ ಮಾಡುವುದಾಗಿ ಸಹೋದರಿ ತನ್ನನ್ನು ಬೆದರಿಸುತ್ತಿದ್ದಳು ಎಂದು ದ್ಯುತಿ ಹೇಳಿದ್ದಾರೆ.

 ಭುವನೇಶ್ವರದಲ್ಲಿ ಒಂದೊಮ್ಮೆ ತನ್ನ ಅಕ್ಕ ಹಾಗೂ ಅಥ್ಲೀಟ್ ಆಗಿರುವ ಸರಸ್ವತಿ ಚೆನ್ನಾಗಿ ಥಳಿಸಿರುವುದಾಗಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು ಎಂದು ದ್ಯುತಿ ಚಂದ್ ಮಾಹಿತಿ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)