varthabharthi

ಅಂತಾರಾಷ್ಟ್ರೀಯ

ತನ್ನದೇ ದಾಖಲೆಯನ್ನು ಒಂದು ವಾರದಲ್ಲೇ ಮುರಿದರು!

24ನೇ ಬಾರಿ ಎವರೆಸ್ಟ್ ಏರಿದ ಕಮಿ ರಿಟ ಶೆರ್ಪಾ

ವಾರ್ತಾ ಭಾರತಿ : 22 May, 2019

ಕಠ್ಮಂಡು (ನೇಪಾಳ), ಮೇ 21: ನೇಪಾಳದ ಪರ್ವತಾರೋಹಿ ಕಮಿ ರಿಟ ಶೆರ್ಪಾ ಕಳೆದ ವಾರವಷ್ಟೇ 23ನೇ ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತುವ ಮೂಲಕ ಅತಿ ಹೆಚ್ಚು ಬಾರಿ ಶಿಖರವನ್ನು ತಲುಪಿದ ತನ್ನದೇ ದಾಖಲೆಯನ್ನು ಮುರಿದಿದ್ದರು. ಮಂಗಳವಾರ ಬೆಳಗ್ಗೆ ಅವರು ಜಗತ್ತಿನ ಅತಿ ಎತ್ತರದ ಶಿಖರವನ್ನು ಇನ್ನೊಮ್ಮೆ ಹತ್ತಿದ್ದಾರೆ.

ಇದರೊಂದಿಗೆ ಅವರು ತನ್ನದೇ ದಾಖಲೆಯನ್ನು ಇನ್ನೊಮ್ಮೆ ಮುರಿದಿದ್ದಾರೆ ಹಾಗೂ 24ನೇ ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದಾರೆ.

50 ವರ್ಷ ಪ್ರಾಯದ ಶೆರ್ಪಾ ನೇಪಾಖ ಬದಿಯಿಂದ ಬೆಳಗ್ಗೆ 6:38ಕ್ಕೆ ಶಿಖರದ ತುದಿಯನ್ನು ಯಶಸ್ವಿಯಾಗಿ ಏರಿದರು.

ನೇಪಾಳದ ಸೊಲುಖುಂಬು ಜಿಲ್ಲೆಯ ತೇಮ್ ಗ್ರಾಮದವರಾಗಿರುವ ಶೆರ್ಪಾ, 1994ರಲ್ಲಿ ತನ್ನ 24ನೇ ವರ್ಷದಲ್ಲಿ ಮೊದಲ ಬಾರಿಗೆ ಎವರೆಸ್ಟ್ ಆರೋಹಣ ಮಾಡಿದ್ದರು.

25 ಬಾರಿ ಏರದೆ ವಿರಮಿಸುವುದಿಲ್ಲ!

ಕಳೆದ ವರ್ಷ 22ನೇ ಬಾರಿ ಶಿಖರದ ತುದಿ ತಲುಪಿ ನೂತನ ದಾಖಲೆ ನಿರ್ಮಿಸಿದ ಬಳಿಕ ನೀಡಿದ ಸಂದರ್ಶನವೊಂದರಲ್ಲಿ, ನಾನು 25 ಬಾರಿ ಮೌಂಟ್ ಎವರೆಸ್ಟ್ ಶಿಖರ ಏರದೆ ವಿರಮಿಸುವುದಿಲ್ಲ ಎಂದು ಹೇಳಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)