varthabharthi

ಗಲ್ಫ್ ಸುದ್ದಿ

ದುಬೈ: ನೂರುಲ್ ಹುದಾ ವತಿಯಿಂದ 'ದಾವತ್-ಇ ಇಫ್ತಾರ್' ಕಾರ್ಯಕ್ರಮ

ವಾರ್ತಾ ಭಾರತಿ : 22 May, 2019

ದುಬೈ: ಪ್ರವಾಸಿಗಳ ತ್ಯಾಗದ ಒಂದಷ್ಟು ಭಾಗವನ್ನು ವಿದ್ಯಾಸಂಸ್ಥೆಗಳ ಏಳಿಗೆಗಾಗಿ ಮೀಸಲಿಡುವುದು ಅತ್ಯಂತ ಅಭಿನಂದನಾರ್ಹವಾಗಿದೆ ಎಂದು  ದುಬೈ ನೂರುಲ್ ಹುದಾ ದಾವತ್-ಇ-ಇಫ್ತಾರ್ ಕಾರ್ಯಕ್ರಮದಲ್ಲಿ ಸಯ್ಯದ್ ಅಲೀ ತಂಙಲ್ ಕುಂಬೋಳ್ ಹೇಳಿದರು.

ದುಬೈ ಅಬೂಹೈಲ್ ಅಬ್ಜದ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನೂರುಲ್ ಹುದಾ ದಾವತ್-ಇ ಇಫ್ತಾರ್  2019 ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಪವಿತ್ರ ಇಸ್ಲಾಂ ಧರ್ಮವು ವಿದ್ಯೆಗೆ ಬಹಳಷ್ಟು ಪ್ರಧಾನ್ಯತೆ ಕಲ್ಪಿಸಿದೆ, ವಿದ್ಯೆಯಿಂದ ಅದು ನೆಲೆ ನಿಂತಿದೆ, ಪವಿತ್ರ ಕುರಾನ್ ನ ಪ್ರಥಮ ಸೂಕ್ತವು ಓದಿರಿ, ಕಲಿಯಿರಿ ಮತ್ತು ಚಿಂತಿಸಿರಿ ಎಂಬ ಸೂಕ್ತದೊಂದಿಗೆ ಪ್ರವಾದಿ ಪೈಗಂಬರರ ಮೂಲಕ ಮನುಕುಲಕ್ಕೆ ಅವತೀರ್ಣಗೊಂಡಿದೆ ಎಂದು ಅವರು ಹೇಳಿದರು.

ನೂರುಲ್ ಹುದಾ ಯುಎಇ ಸಮಿತಿಯ ಗೌರವಾಧ್ಯಕ್ಷ ಸಯ್ಯದ್ ಅಸ್ಗರ್ ಅಲೀ ತಂಙಲ್  ದುವಾ ಆಶಿರ್ವಹಣಗೈದರು. ಸ್ವಾಗತ ಸಮಿತಿ ಚೇರ್ಮೇನ್  ಅಶ್ರಫ್ ಇಬ್ರಾಹಿಮ್ ಯಾಕೂತ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ನೂರುಲ್ ಹುದಾ ಯುಎಇ ಸಮಿತಿಯ ಅಧ್ಯಕ್ಷ ಶರೀಫ್ ಕಾವು ಸ್ವಾಗತಿಸಿದರು.

ಯುಎಇ ಸ್ವದೇಶಿ ಅಬ್ದುಲ್ ಅಝೀಝ್, ಉದ್ಯಮಿ ಅಬ್ದುಲ್ ಖಾದರ್ ಅಂಚಿನಡ್ಕ, ಚಿಂತಕ, ಇಂಗ್ಲಿಷ್ ಅಂಕಣಕಾರ ಮುಜೀಬ್ ಜೈಹೂನ್, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಮೊದಲಾದವರು ಮಾತನಾಡಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಗೌರವಾಧ್ಯಕ್ಷ  ಸೈಯದ್ ಅಲೀ ತಂಙಲ್ ಕುಂಬೋಳ್ ಮತ್ತು ಯುಎಇ ಸ್ವದೇಶಿ  ಅಬ್ದುಲ್ ಅಝೀಝ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನೂರುಲ್ ಹುದಾ ಯುಎಇ ಸಮಿತಿಯ ಗೌರವಾಧ್ಯಕ್ಷ ಸಯ್ಯದ್ ಅಸ್ಗರ್ ಅಲೀ ತಂಙಲ್,  ಎಂಐಸಿ ಅಧ್ಯಕ್ಷ ಸಲಾಮ್ ಹಾಜಿ ಕಾಸರಗೋಡು, ಕೆಐಸಿ ಕೇಂದ್ರ ಸಮಿತಿ ಅಧ್ಯಕ್ಷ ಎಮ್.ಕೆ ಬ್ಯಾರಿ, ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ, ಕೆಐಸಿ ದುಬೈ ಸಮಿತಿಯ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ದಾರುನ್ನೂರ್ ಎಜುಕೇಷನ್ ಸೆಂಟರ್ ಯುಎಇ ಸಮಿತಿಯ ಅಧ್ಯಕ್ಷ ಶಂಸುದ್ದೀನ್ ಸೂರಲ್ಪಾಡಿ, ನೂರುಲ್ ಹುದಾ ಯುಎಇ ಸಮಿತಿಯ ಉಪದೇಶಕರಾದ  ಯೂಸುಫ್ ಬೇರಿಕೆ, ನೂರುಲ್ ಹುದಾ ದುಬೈ ಸಮಿತಿಯ ಕೋಶಾಧಿಕಾರಿ ಯೂಸುಫ್ ಈಶ್ವರಮಂಗಿಲ ನೂರುಲ್ ಹುದಾ ಅಬುಧಾಬಿ ಸಮಿತಿಯ ಅಧ್ಯಕ್ಷ ಅಶ್ರಫ್ ಪಿ.ಕೆ, ಶಾರ್ಜಾ ಸಮಿತಿಯ ಅಧ್ಯಕ್ಷ ಅಶ್ರಫ್ ಗಾಳಿಮುಕ, ಕಾರ್ಯಾಧ್ಯಕ್ಷ ಎಂ.ಪಿ.ಕೆ ಪಲ್ಲಂಗೊಡ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ದಾರುನ್ನೂರ್ ದುಬೈ ಸಮಿತಿಯ ಅಧ್ಯಕ್ಷ ರಫೀಕ್ ಆತೂರು, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಕೆಮ್ಮಿಂಜೆ, ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಅಧ್ಯಕ್ಷ ಅಬ್ದುಲ್ ಖಾದರ್ ಬೈತಡ್ಕ,  ನೂರುಲ್ ಹುದಾ ಯೂತ್ ವಿಂಗ್ ಅಧ್ಯಕ್ಷ  ರಝಾಕ್ ಕಾವು, ಕೋಶಾಧಿಕಾರಿ  ರಿಫಾಯಿ ಗೂನಡ್ಕ, ಕೆಐಸಿ ಅಲ್ ಕೌಸರ್ ಯೂತ್ ವಿಂಗ್ ಅಧ್ಯಕ್ಷ ನವಾಝ್ ಬಿಸಿ ರೋಡ್, ಕಾರ್ಯಾಧ್ಯಕ್ಷ ಆಸಿಫ್ ಮರೀಲ್, ಪ್ರಧಾನ ಕಾರ್ಯದರ್ಶಿ ಜಾಬಿರ್ ಬೆಟ್ಟಂಪಾಡಿ, ದಾರುಸ್ಸಲಾಮ್ ಬೆಳ್ತಂಗಡಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಸಿರ್ ಬಪ್ಪಲಿಗೆ, ದಾರುನ್ನೂರು ಯೂತ್ ಟೀಮ್ ಕೋಶಾಧಿಕಾರಿ ಇಫ್ತಿಕಾರ್ ಕಣ್ಣೂರು, ನೂರುಲ್ ಹುದಾ ಅಬುಧಾಬಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಷೀರ್ ಕಾವು, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಅಲೀ ಮಾಡನ್ನೂರು, ದುಬೈ ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ಸಲಾಮ್ ಬಪ್ಪಲಿಗೆ,  ಅನ್ವರ್ ಮಣಿಲ, ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಅಝೀಝ್ ಸೋಂಪಾಡಿ, ಪ್ರಮುಖರಾದ  ಅಬ್ದುಲ್ ಖಾದರ್ ಹಾಜಿ ಸಂಪ್ಯ,  ಶಂಸುದ್ದೀನ್ ಇಂದುಮೂಲೆ, ಹೈದರ್ ಅಲಿ ಈಶ್ವರಮಂಗಿಳ,  ಶಾರ್ಜಾ ಸಮಿತಿಯ ಗೌರವಾಧ್ಯಕ್ಷ ರಝಾಕ್ ಸೋಂಪಾಡಿ ,ಮೂಸಾ ಕಾವು , ದಾವತೆ ಇಫ್ತಾರ್ ಕಾರ್ಯದರ್ಶಿ ಉಸ್ಮಾನ್ ಮರೀಲ್ ಅಲ್ಲದೆ ಯೂತ್ ವಿಂಗ್  ಪ್ರಮುಖರಾದ ಜಾಬಿರ್ ಬಪ್ಪಳಿಗೆ , ರಫೀಕ್ ಮುಕ್ವೆ, ಶಾಹುಲ್ ಬಿ ಸಿ ರೋಡ್ ಹಾಗೂ ನೂರುಲ್ ಹುದಾ ಅಬುಧಾಬಿ,  ದುಬೈ, ಶಾರ್ಜಾ ಮತ್ತು ಕ್ಲಸ್ಟರ್ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯ ಕ್ರಮದ ಯಶಸ್ವಿಗೆ ಸಹಕರಿಸಿದರು.

ನೂರುಲ್ ಹುದಾ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ಹಾಗೂ ದಾವತ್-ಇ-ಇಫ್ತಾರ್  ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)