varthabharthi


ಕರಾವಳಿ

ಬಿಜೆಪಿ ಅಭ್ಯರ್ಥಿಗೆ 1,62,322 ಮತಗಳ ಮುನ್ನಡೆ

ದ.ಕ.ಲೋಕಸಭಾ ಕ್ಷೇತ್ರ: ಕಳೆದ ಬಾರಿಯ ಗೆಲುವಿನ ದಾಖಲೆ ಮುರಿದ ನಳಿನ್

ವಾರ್ತಾ ಭಾರತಿ : 23 May, 2019

ಮಂಗಳೂರು, ಮೇ 23: ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕಳೆದ ಸಾಲಿನ ಗೆಲುವಿನ ದಾಖಲೆ ಮುರಿದಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ 4,99,030 ಮತಗಳನ್ನು ಪಡೆದಿದ್ದರೆ, ನಳಿನ್ 6,42,739 ಮತಗಳನ್ನು ಪಡೆದು, 1,43,709 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಈ ಬಾರಿ ಕಾಂಗ್ರೆಸ್ ಹೊಸ ಮುಖಕ್ಕೆ ಅವಕಾಶ ಮಾಡಿಕೊಟ್ಟರೂ ಮತದಾರರ ಮನ ಸೆಳೆಯುವಲ್ಲಿ ಸೋತಿದ್ದಾರೆ.
ನಳಿನ್ ಕುಮಾರ್ ಕಟೀಲ್ 4,15,165 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 2,52,843 ಮತ ಪಡೆದಿದ್ದಾರೆ.

ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ 22905 ಮತಗಳನ್ನು ಪಡೆದಿದ್ದಾರೆ. ಒಟ್ಟು 7,03,255 ಮತಗಳ ಎಣಿಕೆಯಾಗಿದೆ. 3,931 ನೋಟ ಮತಗಳು ಚಲಾವಣೆಯಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)