varthabharthi

ರಾಷ್ಟ್ರೀಯ

ಮತ ಎಣಿಕೆ ಕೇಂದ್ರದಲ್ಲಿ ಹೃದಯಾಘಾತದಿಂದ ಮೃತಪಟ್ಟ ಮಧ್ಯಪ್ರದೇಶ ಕಾಂಗ್ರೆಸ್ ನಾಯಕ

ವಾರ್ತಾ ಭಾರತಿ : 23 May, 2019

ಭೋಪಾಲ್, ಮೇ 23: ಲೋಕಸಭಾ ಚುನಾವಣೆಯ ಫಲಿತಾಂಶದ ದಿನವಾದ ಗುರುವಾರ ಮತಎಣಿಕೆಯ ಕೇಂದ್ರದಲ್ಲಿ ಕಾಂಗ್ರೆಸ್‌ನ ಸೆಹೊರ್ ಜಿಲ್ಲಾಮುಖ್ಯಸ್ಥ ರತನ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮತಎಣಿಕೆ ಕೇಂದ್ರದಲ್ಲಿ ಮಾಹಿತಿ ಕಲೆಹಾಕಲು ಸಿಂಗ್ ತೆರಳಿದ್ದರು.ಈ ವೇಳೆ ಅವರಿಗೆ ಎದೆ ನೋವುಕಾಣಿಸಿಕೊಂಡು, ಕುಸಿದುಬಿದ್ದರು. ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲಿ ಮತ್ತೊಂದು ಸೋಲಿನತ್ತ ಮುಖಮಾಡಿದ್ದ ವೇಳೆಯೇ ಈ ಸುದ್ದಿ ಹೊರಬಂದಿದೆ.

ಇತ್ತೀಚೆಗೆ ಕೊನೆಗೊಂಡಿದ್ದ ಮಧ್ಯಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ರಚಿಸಲು ಸಮರ್ಥವಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)