ಪುರಿಯಲ್ಲಿ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಗೆ ಸೋಲು
ಹೊಸದಿಲ್ಲಿ, ಮೇ 24: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ವಕ್ತಾರರಾದ ಸಂಬಿತ್ ಪಾತ್ರ ಮತ್ತು ಬೈಜಯಂತ್ ಜೇ ಪಾಂಡ ಸೋಲನುಭವಿಸಿದ್ದಾರೆ. ಪುರಿಯಿಂದ ಸಂಬಿತ್ ಪಾತ್ರ ಸ್ಪರ್ಧಿಸಿದ್ದರೆ, ಕೇಂದ್ರಪಾರದಿಂದ ಬೈಜಯಂತ್ ಸ್ಪರ್ಧಿಸಿದ್ದರು.
ನವೀನ್ ಪಟ್ನಾಯಕ್ ಜೊತೆಗಿನ ವೈಮನಸ್ಸಿನ ನಂತರ ಬೈಜಯಂತ್ ಬಿಜೆಪಿ ಸೇರಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ಬಿಜು ಜನತಾ ದಳದ ಅನುಭವ್ ಮೊಹಾಂತಿ ವಿರುದ್ಧ ಸ್ಪರ್ಧಿಸಿದ್ದರು.
ಪುರಿಯಲ್ಲಿ ಬಿಜು ಜನತಾ ದಳದ ಪಿನಾಕಿ ಮಿಶ್ರಾ ವಿರುದ್ಧ ಸಂಬಿತ್ ಪಾತ್ರ 11,714 ಮತಗಳ ಅಂತರದಲ್ಲಿ ಸೋಲನುಭವಿಸಿದರು.
Next Story