varthabharthi

ಕರ್ನಾಟಕ

ಲೋಕಸಭಾ ಚುನಾವಣೆ: ರಾಜ್ಯದಲ್ಲಿ 'ನೋಟಾ' ಒತ್ತಿದ ಮತದಾರರು ಎಷ್ಟು ಲಕ್ಷ ಗೊತ್ತಾ ?

ವಾರ್ತಾ ಭಾರತಿ : 24 May, 2019

ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 24: ಪ್ರಜಾಪ್ರಭುತ್ವ ದೇಶದಲ್ಲಿ ನಡೆದ ಅತಿದೊಡ್ಡ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದಲ್ಲಿ ಸುಮಾರು 2.76 ಲಕ್ಷ ಮತದಾರರು ಯಾವುದೇ ಅಭ್ಯರ್ಥಿಯೂ ಬೇಡ ಎಂದು ನೋಟಾಗೆ ತಮ್ಮ ಮತ ಚಲಾಯಿಸಿದ್ದಾರೆ. 

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 2,76,760 ಮತಗಳು ನೋಟಾಗೆ ಬಿದ್ದಿವೆ. ಕೆಲವು ಕಡೆ ಸ್ವತಂತ್ರ ಅಭ್ಯರ್ಥಿಗಳಿಗಿಂತಲೂ ಅಧಿಕ ಮತಗಳು ನೋಟಾ ಪಡೆದುಕೊಂಡಿದ್ದು, ಕೆಲವು ಕಡೆ ಸೋಲು-ಗೆಲುವಿಗೂ ಈ ಮತಗಳು ಪ್ರಮುಖ ಪಾತ್ರ ವಹಿಸಿವೆ ಎನ್ನಲಾಗುತ್ತಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 15,997 ಮತಗಳು ನೋಟಾಗೆ ಚಲಾವಣೆಗೊಂಡಿದ್ದು, ಅತ್ಯಧಿಕ ಮತಗಳಾಗಿವೆ. ಅನಂತರ ರಾಯಚೂರಿನಲ್ಲಿ 13,422, ಚಾಮರಾಜನಗರದಲ್ಲಿ 12,583, ಬೆಂಗಳೂರು ಗ್ರಾಮಾಂತರದಲ್ಲಿ 12,442, ವಿಜಯಪುರದಲ್ಲಿ 12,280, ಹಾಸನದಲ್ಲಿ 11,641, ಬೆಂಗಳೂರು ಉತ್ತರದಲ್ಲಿ 11,617, ಬಾಗಲಕೋಟೆಯಲ್ಲಿ 11 138, ಕೊಪ್ಪಳದಲ್ಲಿ 10,800, ಬೆಂಗಳೂರು ಕೇಂದ್ರದಲ್ಲಿ 10,736, ತುಮಕೂರಿನಲ್ಲಿ 10,285, ಕಲಬುರಗಿಯಲ್ಲಿ 10,437 ಮತಗಳು ನೋಟಾಗೆ ಚಲಾವಣೆಯಾಗಿವೆ.

ಬೆಂಗಳೂರು ದಕ್ಷಿಣದಲ್ಲಿ 9,917, ಬಳ್ಳಾರಿಯಲ್ಲಿ 9,016, ಚಿಕ್ಕಬಳ್ಳಾಪುರದಲ್ಲಿ 8,015, ದಕ್ಷಿಣ ಕನ್ನಡದಲ್ಲಿ 7,375, ಹಾವೇರಿಯಲ್ಲಿ 7,402, ಮೈಸೂರಿನಲ್ಲಿ 5,077, ಶಿವಮೊಗ್ಗದಲ್ಲಿ 6,862, ಚಿಕ್ಕಮಗಳೂರಿನಲ್ಲಿ 7,493 ಮತಗಳು ನೋಟಾಗೆ ಚಲಾವಣೆಯಾಗಿದೆ. ಉಳಿದಂತೆ ಮಂಡ್ಯದಲ್ಲಿ 3,500, ಧಾರವಾಡದಲ್ಲಿ 3,505, ದಾವಣಗೆರೆಯಲ್ಲಿ 3,091, ಬೆಳಗಾವಿಯಲ್ಲಿ 1,623 ಹಾಗೂ ಬೀದರ್‌ನಲ್ಲಿ 1,946 ಮತಗಳು ನೋಟಾ ಪಡೆದಿದ್ದು, ಅತಿ ಕಡಿಮೆ ಮತಗಳಾಗಿವೆ.

ಒಟ್ಟು ಶೇ.0.71 ರಷ್ಟು ಮತಗಳು ನೋಟಾ ಪಡೆದುಕೊಂಡಿದೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 1,806 ಮತಗಳಿಂದ ಸೋತಿದ್ದಾರೆ. ಇದೇ ಕ್ಷೇತ್ರದಲ್ಲಿ 12,583 ಮತಗಳು ನೋಟಾಗೆ ಚಲಾವಣೆಗೊಂಡಿದೆ. ಅಲ್ಲದೆ, ಹಲವು ಕಡೆಗಳಲ್ಲಿ ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದವರಿಗೆ ನೀಡಲಾಗಿದ್ದ ಮತಪತ್ರದಲ್ಲಿಯೂ ನೋಟಾಗೆ ಮತ ಚಲಾವಣೆಗೊಂಡಿರುವುದು ವಿಶೇಷವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)