varthabharthi

ಕ್ರೀಡೆ

ವಿಶ್ವಕಪ್ ಅಭ್ಯಾಸ ಪಂದ್ಯ: ಭಾರತ 179 ರನ್‌ಗೆ ಆಲೌಟ್

ವಾರ್ತಾ ಭಾರತಿ : 25 May, 2019

 ಲಂಡನ್, ಮೇ 25: ನ್ಯೂಝಿಲ್ಯಾಂಡ್‌ನ ಶಿಸ್ತುಬದ್ಧ ಬೌಲಿಂಗ್‌ಗೆ ದಿಕ್ಕಾಪಾಲಾದ ಭಾರತದ ಆಟಗಾರರು ಶನಿವಾರ ನಡೆದ ಐಸಿಸಿ ಏಕದಿನ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ 39.2 ಓವರ್‌ಗಳಲ್ಲಿ ಕೇವಲ 179 ರನ್‌ಗೆ ಸರ್ವಪತನ ಕಂಡಿದ್ದಾರೆ.

ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅವರ ನಿರ್ಧಾರ ತಪ್ಪೆಂದು ತಿಳಿಯಲು ಹೆಚ್ಚು ಹೊತ್ತು ಹಿಡಿಯಲಿಲ್ಲ. 10 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ಶಿಖರ್ ಧವನ್(2) ಹಾಗೂ ರೋಹಿತ್ ಶರ್ಮಾ(2)ಪೆವಿಲಿಯನ್‌ಗೆ ಸೇರಿದರು. ಕೆಎಲ್ ರಾಹುಲ್ 6 ರನ್ ಗಳಿಸಲಷ್ಟೇ ಶಕ್ತರಾದರು. ಆಲ್‌ರೌಂಡರ್ ರವೀಂದ್ರ ಜಡೇಜ(54, 50 ಎಸೆತ, 6 ಬೌಂಡರಿ, 2 ಸಿಕ್ಸರ್)ತಂಡದ ಪರ ಸರ್ವಾಧಿಕ ಸ್ಕೋರ್ ಕಲೆಹಾಕಿದರು. ಹಾರ್ದಿಕ್ ಪಾಂಡ್ಯ(30, 37 ಎಸೆತ, 6 ಬೌಂಡರಿ)ಮಧ್ಯಮ ಕ್ರಮಾಂಕದಲ್ಲಿ ಒಂದಷ್ಟು ಕೊಡುಗೆ ನೀಡಿದರು. ನಾಯಕ ಕೊಹ್ಲಿ(18) ಹಾಗೂ ಬಾಲಂಗೋಚಿ ಕುಲದೀಪ್ ಯಾದವ್ (19)ಎರಡಂಕೆಯ ಸ್ಕೋರ್ ಗಳಿಸಿದರು.

ಆದರೆ, ಟ್ರೆಂಟ್ ಬೌಲ್ಟ್(4-33) ಹಾಗೂ ನೀಶಾನ್(3-26) ದಾಳಿಗೆ ಭಾರತದ ಇನ್ನುಳಿದ ದಾಂಡಿಗರು ನಿರುತ್ತರವಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)