varthabharthiರಾಷ್ಟ್ರೀಯ

ಅಯೋಧ್ಯೆಯಲ್ಲಿ ಗೋವುಗಳ ಮೇಲೆ ಅತ್ಯಾಚಾರ: ಆರೋಪಿಯ ಸೆರೆ

ವಾರ್ತಾ ಭಾರತಿ : 25 May, 2019

ಅಯೋಧ್ಯೆ,ಮೇ 25: ಇಲ್ಲಿ ಗೋವುಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ ರಾಜಕುಮಾರ್ ಎಂಬಾತನನ್ನು ಜನರು ರೆಡ್‌ಹ್ಯಾಂಡ್ ಆಗಿ ಹಿಡಿದಿರುವ ಘಟನೆ ವರದಿಯಾಗಿದೆ.

ಕರ್ತಾಲಿಯಾ ಬಾಬಾ ಆಶ್ರಮದ ಗೆೋಶಾಲೆಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ವ್ಯಕ್ತಿಯೋರ್ವ ಹಲವಾರು ಗೋವುಗಳ ಮೇಲೆ ಅತ್ಯಾಚಾರವೆಸಗಿದ್ದು ದಾಖಲಾಗಿತ್ತು. ಇದನ್ನು ಗಮನಿಸಿದ್ದ ಆಶ್ರಮದ ಸ್ವಯಂಸೇವಕರು ಗೋಶಾಲೆಯ ಮೇಲೆ ನಿಗಾಯಿರಿಸಿದ್ದರು.

ಆರೋಪಿ ರಾಜಕುಮಾರ ಗೋಶಾಲೆಗೆ ಮತ್ತೆ ಬಂದು ಗೋವುಗಳ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಹಿಡಿದ ಸ್ವಯಂಸೇವಕರು ಚೆನ್ನಾಗಿ ಥಳಿಸಿ ಪೊಲೀಸರಿಗೊಪ್ಪಿಸಿದ್ದು,ಆತನನ್ನು ಪ್ರಾಣಿಗಳ ವಿರುದ್ಧ ಕ್ರೌರ್ಯವೆಸಗಿದ ಆರೋಪದಲ್ಲಿ ಬಂಧಿಸಲಾಗಿದೆ.

ಘಟನೆಯ ಬಗ್ಗೆ ಆಶ್ರಮದ ಅರ್ಚಕ ರಾಮದಾಸ್ ಅವರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.

ನವಾಬಗಂಜ್‌ನ ಗೊಂಡಾ ನಿವಾಸಿಯಾಗಿರುವ ರಾಜಕುಮಾರ್,ತಾನು ಮದ್ಯದ ನಶೆಯಲ್ಲಿದ್ದೆ ಮತ್ತು ತಾನೇನು ಮಾಡಿದ್ದೆ ಎನ್ನುವುದು ತನಗೆ ಗೊತ್ತಿಲ್ಲ. ಜನರು ತನ್ನನ್ನು ಹಿಡಿದು,ಥಳಿಸಿದ ಬಳಿಕ ಪೊಲಿಸರಿಗೊಪ್ಪಿಸಿದ್ದು ಮಾತ್ರ ತನಗೆ ನೆನಪಿದೆ ಎಂದು ಸುದ್ದಿಗಾರರಿಗೆ ತಿಳಿಸಿದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)