varthabharthi

ಗಲ್ಫ್ ಸುದ್ದಿ

ದುಬೈನ ಹಿರಿಯ ಉದ್ಯಮಿ ಭರತ್ ಭಾಯ್ ಶಾ ಇನ್ನಿಲ್ಲ

ವಾರ್ತಾ ಭಾರತಿ : 25 May, 2019

  ದುಬೈ, ಮೇ 25: ಇಲ್ಲಿನ ಪ್ರಮುಖ ಭಾರತೀಯ ಉದ್ಯಮಿ ಹಾಗೂ ಅನಿವಾಸಿ ಭಾರತೀಯ ಸಮುದಾಯದ ಹಿರಿಯ ನಾಯಕ ಭರತ್ ಭಾಯ್ ಶಾ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. 87 ವರ್ಷ ವಯಸ್ಸಿನ ಶಾ ಅವರು ಅವರ ಹುಟ್ಟೂರಾದ ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಕೊನೆಯುಸಿರೆಳೆದರೆಂದು ಮೂಲಗಳು ತಿಳಿಸಿವೆ.

  ಶಾ ಅವರ ನಿಧನದ ಬಗ್ಗೆ ದುಬೈನಲ್ಲಿನ ಭಾರತೀಯ ಕಾನ್ಸುಲ್ ಜನರಲ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ ಆರು ದಶಕಗಳಲ್ಲಿ ಯಮನ್, ಸೌದಿ ಆರೇಬಿಯ ಹಾಗೂ ಯುಎಇನಲ್ಲಿ ಅಮೂಲ್ಯವಾದ ಸೇವೆಗಳನ್ನು ಸಲ್ಲಿಸಿದ್ದಕಾಗಿ ಶಾ ಅರಿಗೆ ಭಾರತ ಸರಕಾರವು 2015ರ ಜನವರಿ 9ರಂದು ಅನಿವಾಸಿ ಭಾರತೀಯರಿಗಾಗಿನ ಅತ್ಯುನ್ನತ ಪುರಸ್ಕಾರವಾದ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)