varthabharthi

ನಿಮ್ಮ ಅಂಕಣ

‘ಕ್ರಿಕೆಟ್’ ಜೂಜಾಗದಿರಲಿ

ವಾರ್ತಾ ಭಾರತಿ : 30 May, 2019
-ತಾರಾನಾಥ್ ಮೇಸ್ತ, ಶಿರೂರು

ಮಾನ್ಯರೇ,

ವಿಶ್ವದ 12ನೇ ವಿಶ್ವಕಪ್ ಕ್ರಿಕೆಟ್ ಕ್ರೀಡಾಕೂಟ ಇಂಗ್ಲೆಂಡ್‌ನಲ್ಲಿ ಮೇ 30ರಂದು ಚಾಲನೆ ಪಡೆದು, ಜು.14ರ ವರೆಗೆ, ಹತ್ತು ದೇಶದ ಬಲಿಷ್ಠ ಕ್ರಿಕೆಟ್ ತಂಡಗಳ ನಡುವೆ, ಬಹುದಿನಗಳ ವರೆಗೆ ಸೆಣಸಾಟ ನಡೆಯಲಿದೆ. ಈ ಕ್ರಿಕೆಟ್ ಮಹಾ ಉತ್ಸವವನ್ನು ನಾವು ಜೂಜಾಟವಾಗಿ ಸ್ವೀಕರಿಸದೆ, ಮನೋರಂಜನೆ ಮತ್ತು ಸೌಹಾರ್ದ ಭಾವನೆಯಿಂದ ಸ್ವೀಕರಿಸೋಣ. ಆಗ ಮಾತ್ರ ಕ್ರೀಡಾ ಉತ್ಸವಕ್ಕೆ ನೈಜ ಅರ್ಥ ಬರುತ್ತದೆ. ಈಗೀಗ ಕ್ರೀಡಾ ವೀಕ್ಷಕರು ಪಂದ್ಯದ ಸೋಲು-ಗೆಲುವುಗಳನ್ನು ಬೆಟ್ಟಿಂಗ್ ಮೂಲಕ ಸಂಭ್ರಮಿಸುತ್ತಿದ್ದಾರೆ. ಅದೆಷ್ಟೋ ಕ್ರೀಡಾಭಿಮಾನಿಗಳು ಸಾಲ ಮಾಡಿ ಜೂಜಾಡುತ್ತಾರೆ. ಜೂಜಿನ ವ್ಯಾಧಿಯಿಂದಾಗಿ, ಹಣ ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಪಟ್ಟವರು, ಆತ್ಮಹತ್ಯೆಗೆ ಶರಣಾದವರು, ಬದುಕಿನ ನೆಲೆ ಕಳೆದುಕೊಂಡ ದುರಂತದ ಘಟನೆಗಳು ಈ ಹಿಂದೆ ಬಹಳಷ್ಟು ನಡೆದು ಹೋಗಿವೆ. ಕ್ರೀಡೆ ಯಾವತ್ತೂ ಜೂಜಾಟ ಆಗಬಾರದು, ಸಾಧಕ ಪ್ರತಿಭೆಗಳ ಕೊಂಡಾಡುವ ಕೊಂಡಾಟ ಆಗಬೇಕು. ಗೆಲುವು ಯಾವತ್ತೂ ಹಿತಮಿತ ಆರೋಗ್ಯಕರವಾಗಿ ಸಂಭ್ರಮಿಸುವ ಮನೋರಂಜನೆ ಆಗಬೇಕು. ನ್ಯಾಯವಾದ ಸೋಲನ್ನು ಸ್ವೀಕರಿಸುವ ಧೈರ್ಯವನ್ನು ನಾವು ಹೊಂದಬೇಕು. ಆಗಮಾತ್ರ ಕ್ರೀಡಾ ವೀಕ್ಷಣೆ ಜೂಜಾಟ ಆಗದೆ, ಆರೋಗ್ಯಕರ ಕ್ರೀಡಾ ವೀಕ್ಷಣೆಯಾಗಿ ಅರ್ಥ ಪಡೆದು ಕೊಳ್ಳುತ್ತದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)