varthabharthi

ನಿಮ್ಮ ಅಂಕಣ

ಇವಿಎಂ ದುರುಪಯೋಗಕ್ಕೆ ಯಾರು ಹೊಣೆ?

ವಾರ್ತಾ ಭಾರತಿ : 2 Jun, 2019
ಸದ್ದಾಂಹುಸೇನ್ ಬಿ. ಬಳಗಾನೂರ, ವಿಜಯಪುರ

ಮಾನ್ಯರೇ..

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಲವು ಕಡೆ ಇವಿಎಂಗಳಲ್ಲಿ ಹಲವು ಲೋಪ ದೋಷಗಳು ಕಂಡು ಬಂದಿವೆ ಎಂದು ಹಲವು ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದರೂ ಚುನಾವಣಾ ಆಯೋಗ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ದೇಶದಲ್ಲಿ ಒಟ್ಟು 373 ಕ್ಷೇತ್ರಗಳಲ್ಲಿ ಇವಿಎಂ ಮತಗಳ ಎಣಿಕೆ ತಾಳೆಯಾಗಿಲ್ಲ. ದೇಶದಲ್ಲಿ ನಾಲ್ಕು ಹಂತಗಳಲ್ಲಿ ನಡೆದ 373 ಕ್ಷೇತ್ರಗಳಲ್ಲಿ 220ರಲ್ಲಿ ಹೆಚ್ಚುವರಿ ಮತಗಳು ದಾಖಲಾಗಿವೆ. ಇದರ ಬಗ್ಗೆ ವಿವರಣೆ ಕೇಳಿದರೆ ಚುನಾವಣಾ ಆಯೋಗವು ಕ್ಯಾರೇ ಎನ್ನುತ್ತಿಲ್ಲ. ಇದೆಕ್ಕೆಲ್ಲ ಹೊಣೆ ಯಾರು? ತಮಿಳುನಾಡಿನ ಕೆಲವು ಲೋಕಸಭಾ ಕ್ಷೇತ್ರಗಳಾದ ಕಾಂಚಿಪುರಂ 18,331, ಧರ್ಮಪುರಿ 17,871, ಶ್ರೀಪೆರುಂಬುದೂರಿನಲ್ಲಿ 14,512 ಹಾಗೂ ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಲ್ಲಿ 9,906 ಮತಗಳು ಚಲಾವಣೆಯಾಗಿದ್ದಕ್ಕಿಂತ ಹೆಚ್ಚುವರಿ ಎಣಿಕೆಯಾಗಿವೆ. ಪ್ರತಿ ಎರಡು ಗಂಟೆಗೊಮ್ಮೆ ಚುನಾವಣಾಧಿಕಾರಿಗಳು ಚಲಾವಣೆಯಾದ ಮತಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇಷ್ಟಾದರೂ ಈ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳು ಹೇಗೆ ದಾಖಲಾಗಿವೆ? ಇದರ ಬಗ್ಗೆ ಮಾಹಿತಿ ಕೇಳಿದರೆ ಚುನಾವಣಾ ಆಯೋಗವು ಅಧಿಕೃತ ವೆಬ್‌ಸೈಟ್‌ಲ್ಲಿ ಇದ್ದ ಮಾಹಿತಿಯನ್ನು ಅಳಿಸಿಹಾಕಿದೆ. ಇದಕ್ಕೆ ನೇರ ಹೊಣೆಗಾರರು ಯಾರು?. ಇದರ ಬಗ್ಗೆ ಯಾರಲ್ಲಿ ಮಾಹಿತಿ ಕೇಳಬೇಕು? ಇವಿಎಂಗಳನ್ನು ದುರುಪಯೋಗಪಡಿಸಿಕೊಳ್ಳುವುದು ದೇಶದ ಚುನಾವಣೆಗೆ ಧಕ್ಕೆ ತರುವಂತಹದ್ದಾಗಿದೆ. ಇನ್ನು ಮುಂದೆ ಮತದಾನಕ್ಕಾಗಿ ಯಾವ ರೀತಿಯ ಯಂತ್ರಗಳನ್ನು ಜಾರಿಗೆ ತರಬೇಕು? ಈ ಬಗ್ಗೆ ಚುನಾವಣಾಧಿಕಾರಿಗಳು ಸೂಕ್ತ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)