varthabharthi

ನಿಮ್ಮ ಅಂಕಣ

ಉರುಳಿಸುವ ಮತ್ತು ಉಳಿಸಿಕೊಳ್ಳುವ ಆಟದ ಸಂಕಷ್ಟ!

ವಾರ್ತಾ ಭಾರತಿ : 3 Jun, 2019
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಸರಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ದಿನವೂ ಸಭೆಗಳು ನಡೆಯುತ್ತಲೇ ಇವೆೆ. ಅಸಮಾಧಾನಗೊಂಡ ಮತ್ತು ಅಧಿಕಾರದಾಹಿ ಶಾಸಕರ ಮನವೊಲಿಸುವಂತಹ ಕೆಲಸವೇ ಪ್ರತಿ ದಿನ ನಡೆಯುತ್ತಿದೆ. ಒಂದು ಕಡೆಯಲ್ಲಿ ಇವರಿಗೆ ಸರಕಾರವನ್ನು ಉಳಿಸಿಕೊಳ್ಳುವ ಚಿಂತೆ ಅದಕ್ಕಾಗಿ ಇವರೆಲ್ಲರ ಶ್ರ ು. ಮತ್ತೊಂದು ಕಡೆಯಲ್ಲಿ ಸರಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಬಿಜೆಪಿಯವರ ಆಪರೇಷನ್ ಕಮಲದ ಚಟುವಟಿಕೆ ನಡೆಯುತ್ತಲೇ ಇದೆ. ಇವರಿಗೆ ಸರಕಾರ ಉರುಳಿಸುವ ಚಿಂತೆ, ಒಟ್ಟಿನಲ್ಲಿ ಇವರಿಬ್ಬರ ಆಟದ ನಡುವೆ ಸಿಲುಕಿರುವ ನಾಗರಿಕರು ಸುಸ್ತಾಗಿದ್ದಾರೆ.

ಉಳಿಸಿಕೊಳ್ಳುವವರು ಬೇರೆ ಯಾವ ಕೆಲಸವನ್ನೂ ಮಾಡುವುದಕ್ಕೆ ಆಗುತ್ತಿಲ್ಲ, ಉರುಳಿಸಲು ಹೊರಟವರ ತಂತ್ರಗಳಿಗೆ ಪ್ರತಿ ತಂತ್ರ ಹೆಣೆಯುವುದರಲ್ಲಿಯೇ ಸುಸ್ತಾಗಿದ್ದಾರೆ. ಜನ ಸಾಮಾನ್ಯರಿಗೆ ಬೇಕಾಗಿರುವುದು ಒಂದು ಉತ್ತಮವಾದ ಸರಕಾರ. ಅದು ಯಾರ ನೇತೃತ್ವದ್ದು ಅಥವಾ ಯಾವ ಪಕ್ಷದ್ದಾದರೂ ಸರಿ. ಇನ್ನಾದರೂ ರಾಜ್ಯದ ಹಿತದೃಷ್ಟಿಯಿಂದ ಉರುಳಿಸುವ ಮತ್ತು ಉಳಿಸುವ ಆಟಕ್ಕೆ ಮಂಗಳವಾಗಲಿ. ಇದ್ದೂ ಇಲ್ಲದಂತೆ ಸರಕಾರಗಳಿದ್ದರೆ, ಜನರ ನೋವು ಕೇಳುವವರಾರು?. ಇಂತಹ ಅಭದ್ರತೆಯ ವಾತಾವರಣದಲ್ಲಿ ಅಧಿಕಾರಿ ವರ್ಗ ಸರಕಾರದ ಯಾವ ಯೋಜನೆಗಳನ್ನೂ ಜನರಿಗೆ ಮುಟ್ಟಿಸುವುದಿಲ್ಲ. ಯಾವ ಆದೇಶಗಳನ್ನೂ ಜಾರಿಗೊಳಿಸುವುದಿಲ್ಲ. ದುರಂತವೆಂದರೆ ಉಳಿಸುವ ಮತ್ತು ಉರುಳಿಸುವ ಆಟದಲ್ಲಿ ಅಧಿಕಾರಿಗಳೂ ಪಾಲುದಾರರಾಗಿದ್ದಾರೆ. ಇನ್ನು ದೃಶ್ಯ ಮಾಧ್ಯಮಗಳಲ್ಲಿ ಈ ವಿಚಾರದ ಸುದ್ದಿ ಬ್ರೇಕಿಂಗ್ ನ್ಯೂಸ್‌ಗಳಲ್ಲಿ ನೋಡಿ ನೋಡಿ ಜನರು ರೋಸಿಹೋಗಿದ್ದಾರೆ. ಆದುದರಿಂದ ಇನ್ನಾದರೂ ಜನತೆಯ ಹಿತದೃಷ್ಟಿಯಿಂದ ಉರುಳಿಸಲು ಪ್ರಯತ್ನಿಸುವವರು ತಮ್ಮ ಪ್ರಯತ್ನವನ್ನು ಕೈಬಿಟ್ಟು ಜನರ ಹಿತವನ್ನು ಕಾಯಲಿ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)