varthabharthi

ಗಲ್ಫ್ ಸುದ್ದಿ

ಸೌದಿ ಅರೇಬಿಯದಲ್ಲಿ ಸಂಭ್ರಮದ ಈದುಲ್ ಫಿತ್ರ್: ದೇಶಾದ್ಯಂತ ಹಲವು ದಿನಗಳ ಕಾಲ ಕಾರ್ಯಕ್ರಮ

ವಾರ್ತಾ ಭಾರತಿ : 4 Jun, 2019

ಜಿದ್ದಾ (ಸೌದಿ ಅರೇಬಿಯ), ಜೂ. 4: ಸೌದಿ ಅರೇಬಿಯದಲ್ಲಿ ಸೋಮವಾರ ರಾತ್ರಿ ಚಂದ್ರದರ್ಶನವಾಗಿದ್ದು, ಮಂಗಳವಾರ ಈದುಲ್ ಫಿತ್ರ್ ಆಚರಿಸಲಾಗಿದೆ. ಸಂಭ್ರಮಾಚರಣೆಯು ಜೂನ್ 8ರವರೆಗೆ ಮುಂದುವರಿಯಲಿದ್ದು, ದೇಶಾದ್ಯಂತ 300ಕ್ಕೂ ಅಧಿಕ ಸಮಾರಂಭಗಳು ಮತ್ತು 900ಕ್ಕೂ ಅಧಿಕ ಕಾರ್ಯಕ್ರಮಗಳು ನಡೆಯಲಿವೆ.

ಸೌದಿ ಗಾಯಕರಾದ ರಾಬಿಹ್ ಶಾಕಿರ್ ಮತ್ತು ಮುಹಮ್ಮದ್ ಅಬ್ದು ಹಾಗೂ ಈಜಿಪ್ಟ್ ಗಾಯಕ ಆಂಘಮ್ ರಿಯಾದ್‌ನಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಅಮೆರಿಕದ ಯಕ್ಷಿಣಿಗಾರ ರಾಬ್ ಲೇಕ್ ರಿಯಾದ್‌ನಲ್ಲಿ ಮ್ಯಾಜಿಕ್ ಕಾರ್ಯಕ್ರಮ ನೀಡಲಿದ್ದಾರೆ.

ಸೌದಿ ನಟ ಫಯಾಝ್ ಅಲ್-ಮಾಲಿಕಿ ಮದೀನಾದಲ್ಲಿ ನಾಟಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೌದಿ ಅರೇಬಿಯದ ಇತರ ನಗರಗಳಾದ ಅಸೀರ್, ಜಝನ್ ಮತ್ತು ಖಾಸಿಮ್‌ಗಳಲ್ಲಿಯೂ ವಿವಿಧ ಕಾರ್ಯಕ್ರಮಗಳ ಆಯೋಜನೆಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)