varthabharthi

ನಿಮ್ಮ ಅಂಕಣ

ಯುವಜನ ಮೇಳ ಎಂದು?

ವಾರ್ತಾ ಭಾರತಿ : 4 Jun, 2019
-ಪವನ್ ಕುಮಾರ್ ಎಂ., ರಿಪ್ಪನ್‌ಪೇಟೆ

ಮಾನ್ಯರೇ,

ಜಿಲ್ಲಾ ಮಟ್ಟದ ಯುವಜನ ಮೇಳ ನಡೆದು ಹಲವು ತಿಂಗಳುಗಳೇ ಕಳೆದು ಹೋಗಿದೆ. ಆದರೆ ಇನ್ನೂ ರಾಜ್ಯ ಮಟ್ಟದ ಯುವಜನ ಮೇಳದ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ.

ಕಳೆದ ಬಾರಿ ಫೆಬ್ರವರಿ ಮೊದಲನೇ ವಾರವೇ ರಾಜ್ಯಮಟ್ಟದ ಯುವಜನ ಮೇಳ ಪುತ್ತೂರಿನಲ್ಲಿ ನಡೆದಿತ್ತು. ಆದರೆ ಈ ಬಾರಿ ಜೂನ್ ತಿಂಗಳು ಪ್ರಾರಂಭವಾದರೂ ಯಾವುದೇ ಮಾಹಿತಿ ಸ್ಪರ್ಧಾಳುಗಳಿಗೆ ಇಲ್ಲ. ಹೀಗಾಗಿ ಸ್ಪರ್ಧಾಳುಗಳು ಗೊಂದಲದಲ್ಲಿ ಸಿಲುಕಿದ್ದಾರೆ. ಆದ್ದರಿಂದ ಸಂಬಂಧಿಸಿದವರು ಆದಷ್ಟು ಬೇಗ ರಾಜ್ಯಮಟ್ಟದ ಯುವಜನ ಮೇಳ ಯಾವಾಗ ಎಂದು ದಿನಾಂಕ ಮತ್ತು ಸ್ಥಳ ಪ್ರಕಟಿಸಿ.

-ಪವನ್ ಕುಮಾರ್ ಎಂ., ರಿಪ್ಪನ್‌ಪೇಟೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)