varthabharthi

ಸಿನಿಮಾ

ಸತ್ತೆ ಪೇ ಸತ್ತಾ ರಿಮೇಕ್‌ನಲ್ಲಿ ಶಾರುಕ್

ವಾರ್ತಾ ಭಾರತಿ : 9 Jun, 2019

ಝೀರೋ ಚಿತ್ರದ ಭಾರೀ ಸೋಲಿನ ಬಳಿಕ ಶಾರುಕ್ ಖಾನ್, ಈತನಕ ತನ್ನ ಅಭಿನಯದ ಯಾವುದೇ ಹೊಸ ಚಿತ್ರದ ಘೋಷಣೆ ಮಾಡಿಲ್ಲ. ಆದಾಗ್ಯೂ ಈ ಬಾಲಿವುಡ್ ಬಾದ್‌ಶಾ, 80ರ ದಶಕದ ಸೂಪರ್‌ಹಿಟ್ ಹಿಂದಿ ಚಿತ್ರ 'ಸತ್ತೆ ಪೆ ಸತ್ತಾ' ಚಿತ್ರದ ರಿಮೇಕ್‌ನಲ್ಲಿ ನಟಿಸಲಿದ್ದಾರೆಂಬ ವದಂತಿಗಳು ದಟ್ಟವಾಗಿ ಕೇಳಿಬರುತ್ತಿವೆ. ಬಾಲಿವುಡ್‌ನಲ್ಲಿ ಈಗ ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ ಈ ಬಹುತಾರಾಗಣದ ಈ ಪ್ರಾಜೆಕ್ಟ್ ಬಗ್ಗೆ ಶಾರುಕ್ ಖಾನ್ ತುಂಬಾ ಆಸಕ್ತಿ ವಹಿಸಿದ್ದಾರಂತೆ. ಶಾರುಕ್ ಅಭಿನಯದ ಸೂಪರ್‌ಹಿಟ್ ಚಿತ್ರಗಳಾದ ಮೈ ಹೂಂ ನಾ, ‘ಓಂ ಶಾಂತಿ ಓಂ’ ಹಾಗೂ ಹ್ಯಾಪಿ ನ್ಯೂ ಇಯರ್ ಚಿತ್ರದ ನಿರ್ದೇಶಕಿ ಫರ್ಹಾ ಖಾನ್ ಅವರು ಸತ್ತೆ ಪೆ ಸತ್ತಾ ರಿಮೇಕ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಈ ಚಿತ್ರದ ನಾಯಕಿ ಪಾತ್ರಕ್ಕಾಗಿ ಫರ್ಹಾ ಅವರು ಕತ್ರಿನಾ ಅವರನ್ನು ಸಂಪರ್ಕಿಸಿದ್ದಾರೆ. ಆದರೆ ಕತ್ರೀನಾ ಸದ್ಯ ಭಾರತ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಭಾರತ್ ತೆರೆಕಂಡ ಬಳಿಕ ಹೊಸ ಪ್ರಾಜೆಕ್ಟ್ ಬಗ್ಗೆ ಮಾತಾಡೋಣ ಎಂಬುದಾಗಿ ಆಕೆ ಫರ್ಹಾಗೆ ಭರವಸೆ ನೀಡಿದ್ದಾರೆ.

ಈ ಮಧ್ಯೆ ಭಾರತ್ ಮಾತ್ರವಲ್ಲದೆ ಕತ್ರಿನಾ, ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಚಿತ್ರದಲ್ಲೂ ಅಕ್ಷಯ್ ಕುಮಾರ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)