varthabharthi

ಕ್ರೀಡೆ

ಭಾರತದ ರಾಯಭಾರಿಯನ್ನು ಭೇಟಿಯಾದ ಟೀಮ್ ಇಂಡಿಯಾ

ವಾರ್ತಾ ಭಾರತಿ : 9 Jun, 2019

ಲಂಡನ್, ಜೂ.8: ಉಭಯ ತಂಡಗಳ ನಡುವೆ ನಡೆಯುವ ನಿರ್ಣಾಯಕ ಮುಖಾಮುಖಿಗೆ ಮುಂಚಿತವಾಗಿ ವಿರಾಟ್ ಕೊಹ್ಲಿ ಹಾಗೂ ಅವರ ಬಳಗ ಇಂಗ್ಲೆಂಡ್‌ನಲ್ಲಿರುವ ಭಾರತದ ಹೈಕಮಿಶನರ್ ರುಚಿ ಘನಶ್ಯಾಮ್‌ರನ್ನು ಲಂಡನ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಯಿತು.

ಸಹಾಯಕ ಸಿಬ್ಬಂದಿ ಸಹಿತ ಭಾರತದ ಇಡೀ ತಂಡಕ್ಕೆ ಆತಿಥ್ಯ ನೀಡಿದ ಘನಶ್ಯಾಮ್, ವಿಶ್ವಕಪ್‌ಗೆ ಶುಭಾಶಯ ಕೋರಿದರು. ಲಂಡನ್‌ನಲ್ಲಿರುವ ಭಾರತದ ಹೈಕಮಿಶನ್ ಕಚೇರಿ, ಭಾರತೀಯ ಕ್ರಿಕೆಟ್ ತಂಡದ ಸದಸ್ಯರೊಂದಿಗಿದ್ದ ಫೋಟೊವನ್ನು ಟ್ವಿಟರ್‌ನಲ್ಲಿ ಹಾಕಿದೆ.

2011ರ ವಿಶ್ವ ಚಾಂಪಿಯನ್ ಭಾರತ ಈಗಾಗಲೇ ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಪಂದ್ಯವನ್ನು ಜಯಿಸಿ ಈಗ ನಡೆಯುತ್ತಿರುವ 12ನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)