varthabharthi

ಕ್ರೀಡೆ

ಅಂಪೈರ್‌ಗೆ ಢಿಕ್ಕಿ ಹೊಡೆದ ರಾಯ್

ವಾರ್ತಾ ಭಾರತಿ : 9 Jun, 2019

ಕಾರ್ಡಿಫ್,ಜೂ. 8: ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ಜೇಸನ್ ರಾಯ್ ಶನಿವಾರ ಬಾಂಗ್ಲಾ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ತನ್ನ 9ನೇ ಏಕದಿನ ಶತಕ ದಾಖಲಿಸಿದರೂ, ಅಂಪೈರ್‌ಗೆ ಢಿಕ್ಕಿ ಹೊಡೆದ ಕಾರಣದಿಂದಾಗಿ ಅವರ ಶತಕದ ಸಂಭ್ರಮಾಚರಣೆಗೆ ಸ್ವಲ್ಪ ಹೊತ್ತು ತಡೆ ಉಂಟಾಯಿತು.

ರಾಯ್ 26.5ನೇ ಓವರ್‌ನಲ್ಲಿ ಬಾಂಗ್ಲಾದ ಮುಸ್ತಾಫಿಝರ್ರಹ್ಮಾನ್ ಎಸೆತವನ್ನು ಬೌಂಡರಿಗಟ್ಟಿದರು. ಚೆಂಡು ಬೌಂಡರಿ ಗೆರೆ ದಾಟುವುದನ್ನು ನೋಡುತ್ತಾ ಓಡಿದ ರಾಯ್ ನಾನ್-ಸ್ಟ್ರೈಕರ್ ನಲ್ಲಿದ್ದ ಅಂಪೈರ್ ಜೋಯೆಲ್ ವಿಲ್ಸನ್‌ಗೆ ಆಕಸ್ಮಿಕವಾಗಿ ಢಿಕ್ಕಿ ಹೊಡೆದರು. ವಿಲ್ಸನ್ ಇದನ್ನು ನಿರೀಕ್ಷಿಸಿರಲಿಲ್ಲ. ಈ ಕಾರಣದಿಂದಾಗಿ ಅವರು ನೆಲಕ್ಕೆ ಕುಸಿದು ಬಿದ್ದರು. ನೆಲಕ್ಕೆ ಬಿದ್ದ ವಿಲ್ಸನ್‌ರನ್ನು ಮೇಲಕ್ಕೆತ್ತಿದ ರಾಯ್ ಅವರು ವಿಲ್ಸನ್‌ಗೆ ಅದೃಷ್ಟವಶಾತ್ ಗಾಯವಾಗದಿರುವುದನ್ನು ದೃಢಪಡಿಸಿದ ಬಳಿಕವೇ ಶತಕದ ಸಂಭ್ರಮಾಚರಣೆ ಮಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)