varthabharthi

ಕ್ರೀಡೆ

ಮ್ಯಾಚ್ ನೋಡಲು ಬಂದ ಮಲ್ಯ

ವಾರ್ತಾ ಭಾರತಿ : 9 Jun, 2019

ಲಂಡನ್, ಜೂ.9: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ  9 ಸಾವಿರ ಕೋಟಿ ರೂ.  ಸಾಲ ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಲಂಡನ್‌ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಣೆಗೆ  ರವಿವಾರ  ಆಗಮಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಓವಲ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯ ವೀಕ್ಷಣೆಗೆ ವಿಜಯ ಮಲ್ಯ ಆಗಮಿಸಿದರು.

ಟಾಸ್ ಜಯಿಸಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿದ್ದು, 18 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 96 ರನ್ ಗಳಿಸಿದೆ. ಆರಂಭಿಕ ದಾಂಡಿಗರಾದ ಶಿಖರ್ ಧವನ್ ಅರ್ಧಶತಕ(51) ಮತ್ತು ರೋಹಿತ್ ಶರ್ಮಾ 42 ರನ್ ಗಳಿಸಿ ಆಡುತ್ತಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)