varthabharthi

ಕ್ರೀಡೆ

ವಿಶ್ವಕಪ್: ಭಾರತಕ್ಕೆ ಆಸ್ಟ್ರೇಲಿಯ ವಿರುದ್ಧ 36 ರನ್‌ಗಳ ಜಯ

ವಾರ್ತಾ ಭಾರತಿ : 9 Jun, 2019

 ಲಂಡನ್, ಜೂ.9: ಆರಂಭಿಕ ದಾಂಡಿಗ ಶಿಖರ್ ಧವನ್ ಶತಕ , ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅರ್ಧಶತಕ ನೆರವಿನಲ್ಲಿ ಭಾರತ ಇಲ್ಲಿ ನಡೆದ ವಿಶ್ವಕಪ್ ನ ಹದಿನಾಲ್ಕನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ 36 ರನ್‌ಗಳ ಜಯ ಗಳಿಸಿದೆ.

 ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 353 ರನ್‌ಗಳ ಕಠಿಣ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡ 50ಓವರ್‌ಗಳಲ್ಲಿ  316 ರನ್  ಗಳಿಸುವಷ್ಟರಲ್ಲಿ ಆಲೌಟಾಗಿದೆ.

ಡೇವಿಡ್ ವಾರ್ನರ್ (56), ಸ್ಟೀವನ್ ಸ್ಮಿತ್ (69) ನಾಯಕ ಆ್ಯರೊನ್ ಫಿಂಚ್(36), ಉಸ್ಮಾನ್ ಖ್ವಾಜಾ(42), ಗ್ಲೆನ್ ಮ್ಯಾಕ್ಸ್‌ವೆಲ್ (28) , ಅಲೆಕ್ಸ್ ಕ್ಯಾರಿ (55) ಹೋರಾಟ ಫಲ ನೀಡಲಿಲ್ಲ.

 ಆಸ್ಟ್ರೇಲಿಯ ದಾಂಡಿಗರು ಆರಂಭದಲ್ಲಿ ಎಚ್ಚರಿಕೆಯಿಂದಲೇ ಆಡಿದರು. ವಾರ್ನರ್, ಖ್ವಾಜಾ ಮತ್ತು ಸ್ಮಿತ್ ಬ್ಯಾಟಿಂಗ್ ಭಾರತಕ್ಕೆ ಆತಂಕದ ಕ್ಷಣಗಳನ್ನು ಸೃಷ್ಟಿಸಿತ್ತು. ಆದರೆ ಯಜುವೇಂದ್ರ ಚಹಾಲ್ (62ಕ್ಕೆ 2), ಜಸ್‌ಪ್ರೀತ್ ಬುಮ್ರಾ(61ಕ್ಕೆ 3) , ಭುವನೇಶ್ವರ್ ಕುಮಾರ್ (50ಕ್ಕೆ3) ಆಸ್ಟ್ರೇಲಿಯದ ದಾಂಡಗರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)