varthabharthi

ನಿಮ್ಮ ಅಂಕಣ

ವಿದ್ಯಾರ್ಥಿಗಳಿಗೆ ಶೀಘ್ರ ಬಸ್ ಪಾಸ್ ನೀಡಿ

ವಾರ್ತಾ ಭಾರತಿ : 9 Jun, 2019
ವಿಠಲ.ಆರ್.ಯಂಕಂಚಿ, ಬಮ್ಮನಜೋಗಿ

ಮಾನ್ಯರೇ,

ಪ್ರತಿ ವರ್ಷದಂತೆ ಈ ಬಾರಿಯೂ ಬೇಸಿಗೆಯ ರಜಾ ಅವಧಿ ಮುಗಿದು ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ವಿದ್ಯಾರ್ಥಿಗಳು ತರಗತಿಗೆ ಸುಗಮವಾಗಿ ಹಾಜರಾಗಲು ಕೆಲವೊಂದು ಹಳ್ಳಿಗಳಿಗೆ ಬಸ್ ಸೌಕರ್ಯವಿಲ್ಲ ಮತ್ತು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಬೇಗನೆ ಸಿಗುತ್ತಿಲ್ಲ. ಬಸ್ ಪಾಸ್ ದೊರಕದೆ ಪ್ರತಿದಿನ ವಿದ್ಯಾರ್ಥಿಗಳು ಬಸ್‌ಗಳಲ್ಲಿ ಟಿಕೆಟ್‌ಗೆ ಹಣ ವ್ಯಯಿಸಿ ಪ್ರಯಾಣಿಸುವಂತಾಗಿದೆ. ಬಡ ವಿದ್ಯಾರ್ಥಿಗಳ ಪಾಲಕರಿಗೆ ಶಾಲಾ ಕಾಲೇಜುಗಳ ಶುಲ್ಕ ಪಾವತಿಸಿ ಬಸ್ ಪಾಸ್‌ಗೆ 1,000-1,200ರೂ. ಪಾವತಿಸುವುದು ಹೊರೆಯಾಗಿದೆ. ಇಂತಹ ಸಂದರ್ಭದಲ್ಲಿ ಸಾರಿಗೆ ಇಲಾಖೆ ಬಸ್ ಪಾಸ್ ವಿತರಿಸಲು ವಿಳಂಬ ಮಾಡಿದರೆ ಪಾಸ್ ದರದ ಎರಡು ಪಟ್ಟು ಹಣ ಕೇವಲ ಒಂದು ತಿಂಗಳಲ್ಲಿ ಟಿಕೆಟ್‌ಗೆ ವ್ಯಯಿಸಬೇಕಾಗುತ್ತದೆ. ಕೆಲವು ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ತರಗತಿಗಳು, ಟ್ಯೂಶನ್‌ಗಳು, ಎನ್‌ಸಿಸಿಯಂತಹ ಹಲವಾರು ಕ್ರಿಯಾತ್ಮಕ ಚಟುವಟಿಕೆಗಳು ನಡೆಯುತ್ತವೆ. ಇವುಗಳು ತರಗತಿಯ ನಂತರದ ದಿನಗಳಲ್ಲಿ ಮತ್ತು ರಜಾ ದಿನಗಳಲ್ಲಿ ನಡೆಯುವುದರಿಂದ ಬಸ್ ಪಾಸನ್ನು ವರ್ಷಪೂರ್ತಿಯಾಗಿ ನೀಡಬೇಕು.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)