ಪೋರ್ಚುಗಲ್ ಚೊಚ್ಚಲ ನೇಶನ್ಸ್ ಲೀಗ್ ಚಾಂಪಿಯನ್
ಪೊರ್ಟೊ, ಜೂ.10: ಪೋರ್ಚುಗಲ್ ಫುಟ್ಬಾಲ್ ತಂಡ ಇಲ್ಲಿ ನಡೆದ ಚೊಚ್ಚಲ ನೇಶನ್ಸ್ ಲೀಗ್ ಪ್ರಶಸ್ತಿಯನ್ನು ಜಯಿಸಿದೆ.
ರವಿವಾರ ಇಲ್ಲಿ ನಡೆದ ಫೈನಲ್ನಲ್ಲಿ ನೆದರ್ಲ್ಯಾಂಡ್ ತಂಡವನ್ನು 1-0 ಅಂತರದಲ್ಲಿ ಮಣಿಸಿದ ಪೋರ್ಚುಗಲ್ ತಂಡ ಟ್ರೋಫಿಯನ್ನು ಎತ್ತಿಕೊಂಡಿದೆ.
ಗೊನ್ಸಾಲೋ ಗೈಡೆಸ್ 60ನೇ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲು ಪೋರ್ಚುಗಲ್ ತಂಡಕ್ಕೆ ಟ್ರೋಫಿ ಎತ್ತಲು ನೆರವಾಗಿದೆ
Next Story