varthabharthi

ಕ್ರೀಡೆ

ಧವನ್ ಗಾಯಾಳು

ವಾರ್ತಾ ಭಾರತಿ : 11 Jun, 2019

ನಾಟಿಂಗ್‌ಹ್ಯಾಮ್, ಜೂ.10: ಭಾರತ ಕ್ರಿಕೆಟ್ ತಂಡದ ಆರಂಭಿಕ ದಾಂಡಿಗ ಶಿಖರ್ ಧವನ್ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದ್ದು, ಊದಿಕೊಂಡಿರುವ ಬೆರಳಿನ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿದೆ.

 ಧವನ್ ರವಿವಾರ ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ವೇಗಿ ನಥಾನ್ ಕೌಲ್ಟರ್ ನೀಲ್ ಎಸೆತದಲ್ಲಿ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದಿತ್ತು. ಆದರೆ ಧವನ್ ನೋವಿನಲ್ಲೂ 109 ಎಸೆತಗಳಲ್ಲಿ 117 ರನ್ ಸಿಡಿಸಿದ್ದರು.

  ಗಾಯದಿಂದಾಗಿ ಧವನ್ ಬಳಿಕ ಫೀಲ್ಡಿಂಗ್ ನಡೆಸಲಿಲ್ಲ . ಅವರ ಬದಲಿಗೆ ರವೀಂದ್ರ ಜಡೇಜ ಫೀಲ್ಡಿಂಗ್‌ಗೆ ಇಳಿದಿದ್ದರು. ಧವನ್‌ಗೆ ಕೈ ಬೆರಳಿಗೆ ಆಗಿರುವ ಗಾಯದ ಸ್ವರೂಪದ ಬಗ್ಗೆ ವರದಿ ಬಂದಿಲ್ಲ. ಮುಂದಿನ ಪಂದ್ಯಕ್ಕೆ ತಯಾರಿಗೆ ಇಳಿಯಲು ಧವನ್‌ಗೆ ಫಿಜಿಯೊ ಇನ್ನೂ ಅನುಮತಿ ನೀಡಿಲ್ಲ. ಜೂ.13ರಂದು ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ಮುಂದಿನ ಪಂದ್ಯ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)