varthabharthi

ಕ್ರೀಡೆ

ಡಬ್ಲ್ಯುಟಿಎ ರ್ಯಾಂಕಿಂಗ್

ಬಾರ್ಟಿ ನಂ.2ನೇ ಆಟಗಾರ್ತಿ

ವಾರ್ತಾ ಭಾರತಿ : 11 Jun, 2019

ಪ್ಯಾರಿಸ್, ಜೂ.10: ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿರುವ ಆ್ಯಶ್ಲೆ ಬಾರ್ಟಿ ಸೋಮವಾರ ಬಿಡುಗಡೆಯಾದ ಡಬ್ಲುಟಿಎ ರ್ಯಾಂಕಿಂಗ್ಸ್‌ನಲ್ಲಿ ಆರು ಸ್ಥಾನ ಭಡ್ತಿ ಪಡೆದು ಎರಡನೇ ಸ್ಥಾನಕ್ಕೇರಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಮೂರನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ ಹೊರತಾಗಿಯೂ ನವೊಮಿ ಒಸಾಕಾ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಸೋತಿದ್ದ ಅವರು ಸತತ 3ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಬ್ರಿಟನ್‌ನ ಜೊಹನ್ನಾ ಕಾಂಟಾ ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ ಕಾರಣ 8 ಸ್ಥಾನ ಭಡ್ತಿ ಪಡೆದು 18ನೇ ಸ್ಥಾನಕ್ಕೇರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)