varthabharthi


ಗಲ್ಫ್ ಸುದ್ದಿ

ಶಾರ್ಜಾ: 'ದಾರುನ್ನೂರ್ ಗ್ರಾಂಡ್ ಇಫ್ತಾರ್ – 2019'

ವಾರ್ತಾ ಭಾರತಿ : 11 Jun, 2019

ದುಬೈ: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಯು ಎ ಇ ಕಲ್ಚರಲ್  ಸೆಂಟರ್ ಅಧೀನದಲ್ಲಿ ವರ್ಷಂ ಪ್ರತಿ ನಡೆಸಿಕೊಂಡು ಬರುತ್ತಿರುವ ಬೃಹತ್ ಇಫ್ತಾರ್ ಸಂಗಮವು ಇತ್ತೀಚೆಗೆ ಶಾರ್ಜಾದಲ್ಲಿರುವ ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ಆಡಿಟೋರಿಯಮ್ ನಲ್ಲಿ ನೆರವೇರಿತು.

ಮಜ್ಲಿಸುನ್ನೂರ್ ಕಾರ್ಯಕ್ರಮವು ದಾರುನ್ನೂರ್ ಗ್ರಾಂಡ್ ಇಫ್ತಾರ್ - 2019 ಚೇರ್ಮೇನ್ ಸಯ್ಯದ್ ಅಸ್ಕರ್ ತಂಙಳ್ ನೇತೃತ್ವದಲ್ಲಿ ಆರಂಭಿಸಿತು. ಈ ಸಂದರ್ಭ  ಉಸ್ತಾದ್ ಶರೀಫ್ ಆಶ್ರಫಿ ಮಡಂತ್ಯಾರ್, ಉಸ್ತಾದ್ ಶಾಹುಲ್ ಬಿ ಸಿ ರೋಡ್ ಹಾಗೂ ದಾರುನ್ನೂರ್ ಪ್ರಮುಖರು ಉಪಸ್ಥಿತರಿದ್ದರು. ಬಳಿಕ ಉಸ್ತಾದ್ ಸಲ್ಮಾನ್ ಅಝ್ ಹರಿ ಮಾತನಾಡಿದರು.

ದಾರುನ್ನೂರ್ ಗ್ರಾಂಡ್ ಇಫ್ತಾರ್ – 2019 ಚೇರ್ಮೇನ್ ಸಯ್ಯದ್ ಅಸ್ಕರ್ ಅಲಿ ತಂಙಳ್ ಅಧ್ಯಕ್ಷತೆಯಲ್ಲಿ  ಆರಂಭಿಸಲಾಯಿತು. ವೇದಿಕೆಯಲ್ಲಿ ದಾರುನ್ನೂರ್ ಯು ಎ ಇ ಅಧ್ಯಕ್ಷ ಸಂಶುದ್ದೀನ್ ಸೂರಲ್ಪಾಡಿ, ದಾರುನ್ನೂರ್ ಯು ಎ ಇ ಗೌರವಾಧ್ಯಕ್ಷ ಮಹಮ್ಮದ್ ಮುಸ್ತಾಕ್ ಕದ್ರಿ, ಸಯ್ಯದ್ ಅಬ್ದುಲ್  ಹಕೀಮ್ ತಂಙಳ್, ಮುಖ್ಯ ಪ್ರಭಾಷಕ ಉಸ್ತಾದ್ ಸಲ್ಮಾನ್ ಅಝ್ ಹರಿ, ಯಸ್  ಯಂ ಬಶೀರ್ ಬಿ ಸಿ ಸಿ ಐ ಅಧ್ಯಕ್ಷರು,  ದಾರುನ್ನೂರ್ ಯು ಎ ಇ ಅಡ್ವೈಸರ್ ಉಸ್ತಾದ್ ಶೌಕತ್ ಅಲಿ ಹುದವಿ, ಹಾಜಿ ಮಹಮ್ಮದ್ ಮತೀನ್ ಚಿಂಲಿ,  ಸಂಶುದ್ದೀನ್ ಕಲ್ಕಾರ್, ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ, ಆಶ್ರಫ್ ಖಾನ್ ಮಾಂತೂರ್ ಅಧ್ಯಕ್ಷರು ಕೆ ಐ ಸಿ ದುಬೈ , ದಾರುನ್ನೂರ್ ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ ,ನಾಸಿರ್ ಮೂಡಬಿದ್ರಿ ಎಂ.ಡಿ - ಕ್ರಿಯೇಟಿವ್ ಸ್ಕೆಫೋಲ್ದಿಂಗ್ಸ್, ಉಸ್ತಾದ್ ಅಸ್ಕರ್ ಅಲಿ ಹುದವಿ, ಉಸ್ತಾದ್ ಮಹಮ್ಮದ್ ಸಲ್ಮಾನ್ ಹುದವಿ, ಉಸ್ತಾದ್ ಮಹಮ್ಮದ್ ಷರೀಫ್ ಹುದವಿ , ಉಸ್ತಾದ್ ಮೂಸಲ್ ಫೈಝಿ, ಜಬ್ಬಾರ್ ಎಡನೀರ್ , ಮಹಮ್ಮದ್ ಷರೀಫ್ ಕಾವು ಅಧ್ಯಕ್ಷರು ನೂರುಲ್ ಹುದಾ ಯು ಎ ಇ , ಅಬ್ದುಲ್ ಖಾದರ್ ಬೈತಡ್ಕ ಅಧ್ಯಕ್ಷರು ಸಮ್ಶುಲ್ ಉಲಮಾ ತೋಡಾರ್ , ಯೂಸುಫ್ ಬೇರಿಕೆ, ಮುಹಮ್ಮದ್ ಖಾಝೀ ಲೈನ್  ಮೊದಲಾದವರು ಉಪಸ್ಥಿತರಿದ್ದರು.

ಗ್ರಾಂಡ್ ಇಫ್ತಾರ್ ಕೋಶಾಧಿಕಾರಿ ಅಶ್ರಫ್ ಬಾಳೆಹೊನ್ನೂರ್ ಸ್ವಾಗತ ಭಾಷಣದ ಬಳಿಕ ಕಾರ್ಯಕ್ರಮವನ್ನು ದಾರುನ್ನೂರ್ ಯು ಎ ಇ ಎಡ್ವೈಸರ್ ಉಸ್ತಾದ್ ಶೌಕತ್ ಅಲಿ ಹುದವಿ ಉದ್ಘಾಟಿಸಿದರು.

ಈ ಸಂದರ್ಭ ದಾರುನ್ನೂರಿನ ಸಂಪೂರ್ಣ ವಿವರವನ್ನು ಸಭಿಕರಿಗೆ ನೀಡುವಲ್ಲಿ ಯಶಸ್ವಿಯಾದರು. ಬಳಿಕ ದಾರುನ್ನೂರ್ ಯುಎಇ ಅಧ್ಯಕ್ಷ  ಸಂಶುದ್ದೀನ್ ಸೂರಲ್ಪಾಡಿ ಮಾತನಾಡಿದರು. ದಾರುನ್ನೂರ್ ಗ್ರಾಂಡ್ ಇಫ್ತಾರ್ ಚೆರ್ಮೇನ್ ಸಯ್ಯದ್ ಅಸ್ಕರ್ ಅಲಿ ತಂಙಳ್ ಮಾತನಾಡಿ ಎಲ್ಲಾ ನಿರೀಕ್ಷೆಗಳನ್ನು ಮೀರಿ  ದಾರುನ್ನೂರ್ ಇಫ್ತಾರ್ ಕೂಟ ಅತ್ಯಂತ ವಿಜೃಂಭಣೆಯಿಂದ  ನೇರವೇರಿದ್ದು ಇದೊಂದು ಅಭೂತಪೂರ್ವ ಯಶಸ್ಸಾಗಿ ಪರಿಗಣಿಸಬಹುದಾಗಿದೆ ಎಂದರು.

ಎ. 12 ರಂದು ನಡೆದ ವಿಷನ್ ಕರ್ನಾಟಕ – 2030 ಕಾರ್ಯಕ್ರಮದಲ್ಲಿ ಸಹಕಾರವನ್ನು ನೀಡಿದ್ದ ಉಸ್ತಾದ್ ಅಸ್ಕರ್ ಅಲಿ ಹುದವಿ, ಉಸ್ತಾದ್ ಸಲ್ಮಾನ್ ಹುದವಿ ಮತ್ತು ಉಸ್ತಾದ್ ಮಹಮ್ಮದ್ ಷರೀಫ್ ಹುದವಿಯವರನ್ನು ಈ ಸಂದರ್ಭ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅದೇ ರೀತಿ ದಾರುನ್ನೂರಿಗೆ ಮಾಡುವ ನಿಸ್ವಾರ್ಥ  ಸೇವೆಯನ್ನು ಪರಿಗಣಿಸಿ ವರ್ಷಂಪ್ರತಿ ನೀಡಿವ ಸನ್ಮಾನಕ್ಕೆ ದಾರುನ್ನೂರ್ ಯುಎಇ ಗೌರವಾಧ್ಯಕ್ಷ  ಮಹಮ್ಮದ್ ಮುಸ್ತಾಕ್ ಕದ್ರಿ ಮತ್ತು ದಾರುನ್ನೂರ್ ಯು ಎ ಇ ಕಾರ್ಯದರ್ಶಿ ಮಹಮ್ಮದ್ ರಫೀಕ್ ಸುರತ್ಕಲ್ ಭಾಜನರಾಗಿದ್ದು ಅವರನ್ನು ಸಹ ಈ ಸಂದರ್ಭ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಬಳಿಕ ಅತಿಥಿಗಳಾದ ಯಸ್ ಯಂ ಬಶೀರ್ , ಹಾಜಿ ಮಹಮ್ಮದ್ ಮತೀನ್ ಚಿಂಲಿ,  ಸಂಶುದ್ದೀನ್ ಕಲ್ಕಾರ್,  ನಾಸಿರ್ ಕ್ರಿಯೇಟಿವ್ ಸ್ಕೆಫೋಲ್ಡಿಂಗ್ಸ್ ,  ಹಾಜಿ ಅಬ್ದುಲ್ ಲತೀಫ್ ಮದರ್ ಇಂಡಿಯಾ,  ಷರೀಫ್ ಕಾವು,  ಅಶ್ರಫ್ ಖಾನ್ ಮಾಂತೂರ್  ಮೊದಲಾದವರು ಮಾತನಾಡಿ, ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಗ್ರಾಂಡ್ ಇಫ್ತಾರ್ - 2019 ಇದರ ಸಹ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ನಿರೂಪಿಸಿದರೆ, ಸಮೀರ್ ಇಬ್ರಾಹಿಂ ಕಲ್ಲರೆ ಛಾಯಾ ಗ್ರಾಹಕರಾಗಿ ಸಹಕರಿಸಿದರು.

ಗ್ರಾಂಡ್ ಇಫ್ತಾರ್ 2019 ಇದರ ಕಾರ್ಯದರ್ಶಿ  ಅಬ್ದುಲ್ ಸಲಾಂ ಬಪ್ಪಳಿಗೆ ಮತ್ತು  ಕೋ ಚೇರ್ಮೇನ್  ಮಹಮ್ಮದ್ ರಫೀಕ್ ಆತೂರು  ಕಾರ್ಯಕ್ರಮ ಯಶಸ್ವಿಗೊಳ್ಳಲು ಪ್ರಮುಖ ಪಾತ್ರ ವಹಿಸಿದರು. ನವಾಝ್ ಬಿ ಸಿ ರೋಡ್, ಇಲ್ಯಾಸ್ ಕಡಬ,  ಸಿರಾಜ್ ಬಿ.ಸಿ ರೋಡ್,  ಸಾಜಿದ್ ಬಜ್ಪೆ, ಮಹಮ್ಮದ್ ರಫೀಕ್ ಸುರತ್ಕಲ್,  ಅಶ್ರಫ್ ಬಾಳೆ ಹೊನ್ನೂರ್,  ಉಸ್ಮಾನ್ ಕೆಮ್ಮಿಂಜೆ,  ಹನೀಫ್ ಕೆ.ಪಿ ಮೂಡಬಿದ್ರಿ, ಸಂಶುದ್ದೀನ್ ಮೂಡಬಿದ್ರಿ,  ನೂರ್ ಮಹಮ್ಮದ್ ನೀರ್ಕಜೆ , ನಾಸಿರ್ ಬಪ್ಪಳಿಗೆ,  ಜಾಬಿರ್ ಬಪ್ಪಳಿಗೆ,  ಇಂತಿಯಾಝ್ ಕಡಬ,  ಮಹಮ್ಮದ್ ಪಾತೂರ್,  ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ಶಾಹುಲ್ ಬಿ.ಸಿ ರೋಡ್,  ಆಸಿಫ್ ಮರೀಲ್,  ರಹ್ಮಾನ್ ಪೆರಾಜೆ , ಉಸ್ಮಾನ್ ಮರೀಲ್, ರಿಯಾಝ್ ಕುಳಾಯಿ ಮೊದಲಾದವರು ಸಹಕರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)