varthabharthi

ಕರ್ನಾಟಕ

ಮುಖ್ಯಮಂತ್ರಿ ಜಗನ್ ಯುವಕರಿಗೆ ಪ್ರೇರಣೆ: ನಿಖಿಲ್ ಕುಮಾರಸ್ವಾಮಿ

ವಾರ್ತಾ ಭಾರತಿ : 11 Jun, 2019

ವಿಜಯವಾಡ/ಬೆಂಗಳೂರು, ಜೂ.11: ರಾಜಕೀಯ ಜೀವನ, ರಾಜಕೀಯ ಕ್ಷೇತ್ರದಲ್ಲಿರುವ ಎಲ್ಲ ಯುವಕರಿಗೆ, ಕಾರ್ಯಕರ್ತರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಪ್ರೇರಣೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ವಿಜಯವಾಡದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್.ಜಗನ್ ಮೋಹನ್ ರೆಡ್ದಿ ಅವರನ್ನು ಭೇಟಿ ಮಾಡಿ, ನೂತನ ಸರಕಾರಕ್ಕೆ ಅಭಿನಂದನೆ ಕೋರಿರುವ ನಿಖಿಲ್, ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅಂಧ್ರದಲ್ಲಿ ಜಗನ್ ಅಣ್ಣಾ ಎಂದೇ ಜನಪ್ರಿಯರಾಗಿರುವ ಜಗನ್‌ಮೋಹನ್ ರೆಡ್ಡಿ, ಹತ್ತು ವರ್ಷಗಳಿಗೂ ಹೆಚ್ಚು ಸುಧೀರ್ಘ ಕಾಲದ ಅವರ ಹೋರಾಟದ ದಾರಿ ಎಲ್ಲ ಯುವ ರಾಜಕಾರಣಿಗಳಿಗೆ ಮಾದರಿ. ಜನರ ಸೇವೆಗಾಗಿ ಅವರ ಬದ್ದತೆ ಮತ್ತು ಎದುರಾದ ಎಲ್ಲ ಅಡೆತಡೆ, ಸೋಲು, ಸವಾಲುಗಳನ್ನು ಮೀರಿ, ಗುರಿಮುಟ್ಟುವವರೆಗೂ ವಿರಮಿಸದ ಅವರ ಛಲ, ದಿಟ್ಟತನ, ಹೋರಾಟಗಳಿಗೆ ಜನ ಆಶೀರ್ವಾದ ಮಾಡಿದ್ದಾರೆ ಎಂದು ನಿಖಿಲ್ ಬಣ್ಣಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)