varthabharthi

ಕರ್ನಾಟಕ

ಬೊಳುವಾರು, ಮರುಳಸಿದ್ದಪ್ಪ, ಮೊಗಳ್ಳಿ ಗಣೇಶ್ ಸೇರಿ 5 ಮಂದಿಗೆ ಮಾಸ್ತಿ ಪ್ರಶಸ್ತಿ

ವಾರ್ತಾ ಭಾರತಿ : 11 Jun, 2019

ಬೆಂಗಳೂರು, ಜೂ.11: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೊಡಮಾಡುವ 2019ರ ಮಾಸ್ತಿ ಪ್ರಶಸ್ತಿಗೆ ಹಿರಿಯ ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಬೊಳುವಾರು ಮುಹಮ್ಮದ್ ಕುಂಞಿ, ಈಶ್ವರಚಂದ್ರ, ಸವಿತಾ ನಾಗಭೂಷಣ ಹಾಗೂ ಡಾ.ಮೊಗಳ್ಳಿ ಗಣೇಶ್ ಭಾಜನರಾಗಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ. 

ಪ್ರಶಸ್ತಿಯನ್ನು ಜೂ.29ರಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಸಭಾಂಗಣದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪಡೆದವರಿಗೆ ಸನ್ಮಾನ, ಮಾಸ್ತಿ ಪ್ರಶಸ್ತಿ ಫಲಕ, 25 ಸಾವಿರ ರೂ.ನಗದು ಸಲ್ಲಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)