varthabharthi

ಕರಾವಳಿ

ಜೂನ್, ಜುಲೈಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಕಂದಾಯ, ಪಿಂಚಣಿ ಅದಾಲತ್

ವಾರ್ತಾ ಭಾರತಿ : 11 Jun, 2019

ಬಂಟ್ವಾಳ, ಜೂ. 11: ಜೂನ್ ಮತ್ತು ಜುಲೈ ತಿಂಗಳಲ್ಲಿ ಬಂಟ್ವಾಳ ತಾಲೂಕಿನ ನಾನಾ ಕಡೆಗಳಲ್ಲಿ ಕಂದಾಯ ಅದಾಲತ್ ನಡೆಸಲು ಆಡಳಿತ ತೀರ್ಮಾನಿಸಿದ್ದು, ಈ ಕುರಿತು ತಹಶೀಲ್ದಾರ್ ರಶ್ಮಿ ನಡೆಯುವ ಸ್ಥಳದ ವಿವರ ನೀಡಿದ್ದಾರೆ.

ಜೂ. 13ರಂದು ಪಾಣೆಮಂಗಳೂರು ಹೋಬಳಿಯ ಇರಾ, ಮಂಚಿ, ಫಜೀರು, ಕುರ್ನಾಡು ಗ್ರಾಪಂ ವ್ಯಾಪ್ತಿಯ ಇರಾ, ಮಂಜಿ, ಫಜೀರು ಕುರ್ನಾಡು ಗ್ರಾಪಂಗೊಳಪಡುವ ಅದಾಲತ್ ಇರಾ ಗ್ರಾಪಂ ಸಭಾಭವನದಲ್ಲಿ ನಡೆಯಲಿದೆ.

ಜೂ. 20ರಂದು ಬಂಟ್ವಾಳ ಹೋಬಳಿಯ ರಾಯಿ ಗ್ರಾಪಂನ ಬಿ.ಕಸಬಾ, ಅಮ್ಟಾಡಿ, ಕುರಿಯಾಳ, ಅರಳ, ರಾಯಿ, ಕೊಯಿಲ ಗ್ರಾಮಗಳಿಗೆ ರಾಯಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅದಾಲತ್ ನಡೆಯುವುದು. ಜೂ. 27ರಂದು ವೀರಕಂಭ ಗ್ರಾಪಂನಲ್ಲಿ ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ, ವಿಟ್ಲಪಡ್ನೂರು ಗ್ರಾಮಗಳಿಗೆ ಒಳಪಡುವ ಅದಾಲತ್, ಜು. 3ರಂದು ಮೇರಮಜಲು ಗ್ರಾಪಂ ಸಭಾಭವನದಲ್ಲಿ ಮೇರಮಜಲು, ಕೊಡ್ನಣ್, ಪುದು, ತುಂಬೆ, ಕಳ್ಳಿಗೆ ಗ್ರಾಮಕ್ಕೊಳಪಡುವ ಅದಾಲತ್ ನಡೆಯಲಿದೆ. ಜು. 10ರಂದು ಸರಪಾಡಿ ಪಂಚಾಯತ್ ನಲ್ಲಿ ಸರಪಾಡಿ, ಮಣಿನಾಲ್ಕೂರು, ನಾವೂರು, ದೇವಸ್ಯಪಡೂರು, ಕಾವಳಮುಡೂರು, ಕಾಡಬೆಟ್ಟು, ಕುಡಂಬೆಟ್ಟು ಗ್ರಾಮಗಳಿಗೆ ಒಳಪಡುವ ಕಂದಾಯ, ಪಿಂಚಣಿ ಅದಾಲತ್ ನಡೆಯುವುದು.

ಜು. 17ರಂದು ವಿಟ್ಲ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಪುಣಚ, ಕೇಪು, ಅಳಿಕೆ, ಪೆರುವಾಯಿ, ಮಾಣಿಲ, ವಿಟ್ಲ ಕಸಬಾ, ವಿಟ್ಲಮುಡ್ನೂರು ಗ್ರಾಮಗಳಿಗೆ ಒಳಪಡುವ ಅದಾಲತ್, ಜುಲೈ 24ರಂದು ಕಡೇಶ್ವಾಲ್ಯ ಗ್ರಾಪಂ ಸಭಾಭವನದಲ್ಲಿ ಕಡೇಶ್ವಾಲ್ಯ, ಬರಿಮಾರು, ಬಾಳ್ತಿಲ ಗ್ರಾಪಂಗೆ ಒಳಪಡುವ ಅದಾಲತ್ ಮತ್ತು ಜುಲೈ 31ರಂದು ಕೆದಿಲದಲ್ಲಿ ಪೆರ್ನೆ, ಬಿಳಿಯೂರು, ಕೆದಿಲ, ಅನಂತಾಡಿ, ನೆಟ್ಲಮುಡ್ಣುರು, ಇಡ್ಕಿದು, ಕುಳ, ಮಾಣಿ ಪೆರಾಜೆ ಗ್ರಾಮಗಳಿಗೆ ಒಳಪಟ್ಟ ಕಂದಾಯ ಮತ್ತು ಪಿಂಚಣಿ ಅದಾಲತ್ ನಡೆಯಲಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)