varthabharthi

ಕರ್ನಾಟಕ

ಚಿಕ್ಕಮಗಳೂರು: ಲಾಲ್ ಬಹುದ್ದೂರ್ ಶಾಸ್ತ್ರಿ ಕಾಲೇಜಿಗೆ ಎಡಿಸಿ ಭೇಟಿ, ಪರಿಶೀಲನೆ

ವಾರ್ತಾ ಭಾರತಿ : 12 Jun, 2019

ಚಿಕ್ಕಮಗಳೂರು, ಜೂ.11: ನಗರದ ಲಾಲ್ ಬಹುದ್ದೂರ್ ಶಾಸ್ತ್ರಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಮಂಗಳವಾರ ಭೇಟಿ ನೀಡಿ ಶಿಥಿಲಗೊಂಡಿರುವ ಕಟ್ಟಡವನ್ನು ಪರಿಶೀಲಿಸಿದರು.

ನಂತರ ಮಾತನಾಡಿದ ಅವರು ಕಟ್ಟಡ ವಾಸ್ತವದ ಸ್ಥಿತಿ ನೋಡಿದರೆ ದುರಸ್ತಿ ಮಾಡುವ ಸ್ಥಿತಿಯಲಿಲ್ಲ, ಇದನ್ನು ಪುನರ್ ನಿರ್ಮಾಣ ಮಾಡುವುದೇ ಒಳಿತು ಎಂದ ಅವರು, ಈ ಹಿಂದೆ ಸರಕಾರಕ್ಕೆ ಕಟ್ಟಡ ದುರಸ್ಥಿಗಾಗಿ 75 ಲಕ್ಷ ರೂ. ಅನುದಾನ ಕೋರಿ ವರದಿ ಕಳುಹಿಸಲಾಗಿದೆ. ಆದರೆ ಯಾವುದೇ ಹಣ ಬಿಡುಗಡೆಗೊಂಡಿಲ್ಲ, ಪುನಃ ಇಲ್ಲಿನ ವಾಸ್ತವದ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವರದಿ ತಯಾರಿಸಿ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರಾಧಾಕೃಷ್ಣ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಜಗದೀಶ್, ಕನ್ನಡ ಸೇನೆಯ ಅಧ್ಯಕ್ಷ ರಾಜೇಗೌಡ, ನಗರ ಘಟಕದ ಅಧ್ಯಕ್ಷ ಶಂಕರಗೌಡ, ಪ್ರಾಂಶುಪಾಲ ಸಿದ್ಧಪ್ಪ ಟಕ್ಕಳಕಿ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)