varthabharthi

ಕ್ರೀಡೆ

ಭಾರತ-ನೂಝಿಲ್ಯಾಂಡ್ ಪಂದ್ಯಕ್ಕೂ ಭಾರೀ ಮಳೆಯ ಭೀತಿ?

ವಾರ್ತಾ ಭಾರತಿ : 12 Jun, 2019

 ನಾಟಿಂಗ್‌ಹ್ಯಾಮ್, ಜೂ.11: ಟ್ರೆಂಟ್‌ಬ್ರಿಡ್ಜ್‌ನಲ್ಲಿ ಗುರುವಾರ ನಡೆಯಲಿರುವ ಭಾರತ-ನ್ಯೂಝಿಲ್ಯಾಂಡ್ ವಿಶ್ವಕಪ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ.

ಹವಾಮಾನ ಇಲಾಖೆಯ ಪ್ರಕಾರ, ಗುರುವಾರ ಮಧ್ಯಾಹ್ನದ ವೇಳೆಗೆ ಮಳೆ ಸುರಿಯಬಹುದು. ಹೀಗಾಗಿ ಪಂದ್ಯದ ಅವಧಿ ಕಡಿತವಾಗಬಹುದು.
ಕಳೆದ ಎರಡು ದಿನಗಳಿಂದ ಇಂಗ್ಲೆಂಡ್‌ನಾದ್ಯಂತ ಮಳೆಯಾಗುತ್ತಿದೆ. ಸ್ಥಳೀಯ ಹವಾಮಾನ ಇಲಾಖೆ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.
‘‘ಈ ವಾರದಲ್ಲಿ ನಾಟಿಂಗ್‌ಹ್ಯಾಮ್ ಪ್ರದೇಶದಲ್ಲಿ ಮಳೆಗೆ ಸಂಬಂಧಿಸಿ ಹಳದಿ ವಾರ್ನಿಂಗ್ ನೀಡಲಾಗಿದೆ. ಹವಾಮಾನ ಕಚೇರಿ ತನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಎಚ್ಚರಿಕೆಯು ಬರ್ಮಿಂಗ್‌ಹ್ಯಾಮ್, ಪೀಟರ್‌ಬೊರಫ್ ಹಾಗೂ ನ್ಯೂಕಾಸ್ಟ್ಲೇಗೆ ಅನ್ವಯಿಸಲಿದೆ. ನಿರಂತರ ಮಳೆಯಿಂದಾಗಿ ನೆರೆ ಪರಿಸ್ಥಿತಿ ಉಂಟಾಗಿ, ಸಾರಿಗೆ ವ್ಯವಸ್ಥೆಗೆ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)