varthabharthi

ಕ್ರೀಡೆ

ರಾಹುಲ್‌ರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಬೇಕು

ವಾರ್ತಾ ಭಾರತಿ : 12 Jun, 2019

 ಹೊಸದಿಲ್ಲಿ, ಜೂ.11: ಶಿಖರ್ ಧವನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಭಾರತ ಆತಂಕಕ್ಕೀಡಾಗಬಾರದು. ಮೆಗಾ ಟೂರ್ನಿಯಲ್ಲಿ ಭಾರತ ಸಾಕಷ್ಟು ಶಕ್ತಿಶಾಲಿಯಾಗಿದೆ.ಧವನ್ ಗಾಯಗೊಂಡಿರುವುದು ಭಾರತ ತಂಡಕ್ಕೆ ಭಾರೀ ನಷ್ಟ. ಆದರೆ, ಆ ಬಗ್ಗೆ ಚಿಂತಿಸಿ ಫಲವಿಲ್ಲ. ಕೆಎಲ್ ರಾಹುಲ್‌ರನ್ನು ಆರಂಭಿಕ ಆಟಗಾರನಾಗಿಯೂ, ದಿನೇಶ್ ಕಾರ್ತಿಕ್‌ರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವುದು ಒಳಿತು ಎಂದು ಭಾರತದ ಮಾಜಿ ವಿಕೆಟ್‌ಕೀಪರ್ ಕಿರಣ್ ಮೋರೆ ಸಲಹೆ ನೀಡಿದ್ದಾರೆ.

‘‘ಧವನ್ ಓರ್ವ ಪಂದ್ಯ ಗೆಲ್ಲಿಸಬಲ್ಲ ಆಟಗಾರ ಎಂದು ನನಗೆ ಗೊತ್ತಿದೆ. ಅವರು ಐಸಿಸಿ ಟೂರ್ನಿಗಳಲ್ಲಿ ಯಾವಾಗಲೂ ಚೆನ್ನಾಗಿ ಆಡುತ್ತಾರೆ. ರಾಹುಲ್‌ರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಬೇಕೆನ್ನುವುದು ನನ್ನ ಸಲಹೆ. ಧವನ್‌ರಿಂದ ತೆರವಾದ ಆರಂಭಿಕ ಸ್ಥಾನ ತುಂಬಲು ರಾಹುಲ್ ಉತ್ತಮ ಆಯ್ಕೆ’’ ಎಂದು ಮೋರೆ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)