varthabharthi

ರಾಷ್ಟ್ರೀಯ

ಓರ್ವ ಉಗ್ರನ ಸಾವು

ಜನನಿಬಿಡ ರಸ್ತೆಯಲ್ಲಿ ಉಗ್ರರ ದಾಳಿ: ಐವರು ಯೋಧರು ಹುತಾತ್ಮ

ವಾರ್ತಾ ಭಾರತಿ : 12 Jun, 2019

ಶ್ರೀನಗರ, ಜೂ.12: ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಜನನಿಬಿಡ ರಸ್ತೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇನ್ ಸ್ಪೆಕ್ಟರ್ ಸೇರಿದಂತೆ ಇತರ ಐವರು ದಾಳಿಯಲ್ಲಿ ಗಾಯಗೊಂಡಿದ್ದಾರೆ.

ಅನಂತ್ ನಾಗ್ ನ ಕೆಪಿ ರೋಡ್ ನಲ್ಲಿ ಇಬ್ಬರು ಉಗ್ರರು ಗ್ರೆನೇಡ್ ಎಸೆದು ನಂತರ ಆಟೊಮ್ಯಾಟಿಕ್ ರೈಫಲ್ ಗಳ ಮೂಲಕ ಗುಂಡಿನ ಮಳೆಗರೆದರು ಎಂದು ವರದಿಯಾಗಿದೆ. ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)