varthabharthi

ಕ್ರೀಡೆ

ಮುಹಮ್ಮದ್ ಆಮಿರ್‌ಗೆ ಐದು ವಿಕೆಟ್ ಗೊಂಚಲು

ವಿಶ್ವಕಪ್: ವಾರ್ನರ್‌ಗೆ ಶತಕ ಸಂಭ್ರಮ: ಪಾಕ್‌ಗೆ 308 ರನ್ ಸವಾಲು

ವಾರ್ತಾ ಭಾರತಿ : 12 Jun, 2019

 ಟಾಂಟನ್, ಜೂ.12: ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಶತಕ(107, 111 ಎಸೆತ) ಹಾಗೂ ಆ್ಯರೊನ್ ಫಿಂಚ್(82, 84 ಎಸೆತ)ಅರ್ಧಶತಕದ ಕೊಡುಗೆ ನೆರವಿನಿಂದ ಆಸ್ಟ್ರೇಲಿಯ ತಂಡ ವಿಶ್ವಕಪ್‌ನ 17ನೇ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವಿಗೆ 308 ರನ್ ಸವಾಲು ನೀಡಿದೆ.

 ಟಾಸ್ ಜಯಿಸಿದ ಪಾಕಿಸ್ತಾನ ತಂಡ ಆಸೀಸ್‌ನ್ನು ಬ್ಯಾಟಿಂಗ್‌ಗೆ ಇಳಿಸಿತು.  ಫಿಂಚ್ ಹಾಗೂ ವಾರ್ನರ್ ಮೊದಲ ವಿಕೆಟ್‌ಗೆ 146 ರನ್ ಜೊತೆಯಾಟ ನಡೆಸಿದ ಹೊರತಾಗಿಯೂ ಆಸೀಸ್ ತಂಡ ಪಾಕ್‌ನ ವೇಗದ ಬೌಲರ್ ಮುಹಮ್ಮದ್ ಆಮಿರ್(5-30) ದಾಳಿಗೆ ನಲುಗಿ 49 ಓವರ್‌ಗಳಲ್ಲಿ 307 ರನ್‌ಗೆ ಆಲೌಟಾಯಿತು.

70ಕ್ಕೆ 2 ವಿಕೆಟ್ ಪಡೆದ ಶಾಹೀನ್ ಅಫ್ರಿದಿ ಹಿರಿಯ ಬೌಲರ್ ಆಮಿರ್‌ಗೆ ಸಾಥ್ ನೀಡಿದರು.

ಶೇನ್ ಮಾರ್ಷ್(23), ಮ್ಯಾಕ್ಸ್‌ವೆಲ್(20) ಹಾಗೂ ಕಾರೆ(20) ಎರಡಂಕೆಯ ಸ್ಕೋರ್ ಗಳಿಸಿದರು.

ವಾರ್ನರ್ ಚೆಂಡುವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧಕ್ಕೆ ಒಳಗಾದ ಬಳಿಕ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15ನೇ ಶತಕ(107, 111 ಎಸೆತ, 11 ಬೌಂಡರಿ, 1 ಸಿಕ್ಸರ್)ಸಿಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)