varthabharthi

ರಾಷ್ಟ್ರೀಯ

ಮಾವೋವಾದಿ ನರ್ಮದಾ, ಪತಿ ಬಂಧನ

ವಾರ್ತಾ ಭಾರತಿ : 12 Jun, 2019

ಗಡ್ಚಿರೋಳಿ, ಜೂ. 12: ತೆಲಂಗಾಣದ ಆದಿಲಾಬಾದ್ ಸಮೀಪದ ಗಡಿ ಪಟ್ಟಣ ಸಿರೋಂಚಾದಲ್ಲಿ ಹಿರಿಯ ನಕ್ಸಲ್ ನಾಯಕಿ ನರ್ಮದಾ ಹಾಗೂ ಆಕೆಯ ಪತಿ ಕಿರಣ್‌ನನ್ನು ಗಡ್ಚಿರೋಳಿ ಪೊಲೀಸರು ಬಂಧಿಸಿದ್ದಾರೆ.

 ‘‘ಅವರು ಹೈದರಾಬಾದ್‌ನಿಂದ ಹಿಂದಿರುಗುತ್ತಿದ್ದಾಗ ಸಿರೋಂಚಾ ಪಟ್ಟಣದಲ್ಲಿ ಸೋಮವಾರ ಸಂಜೆ ವಶಕ್ಕೆ ತೆಗೆದುಕೊಂಡೆವು. ಬುಧವಾರ ರಾತ್ರಿ ವಶಕ್ಕೆ ಬಂಧಿಸಿದೆವು’’ ಎಂದು ಗಡ್ಚಿರೋಳಿ ಪೊಲೀಸ್ ಅಧೀಕ್ಷಕ ಶೈಲೇಶ್ ಬಾಲಕ್‌ವಾಡೆ ತಿಳಿಸಿದ್ದಾರೆ. ನರ್ಮದಾ ಕ್ಯಾನ್ಸರ್ ಪೀಡಿತಳಾಗಿದ್ದಾಳೆ. ಕಿಮೋಥೆರಪಿ ಚಿಕಿತ್ಸೆ ಪಡೆಯಲು ಆಕೆ ಹೈದರಾಬಾದ್‌ಗೆ ತೆರಳಿದ್ದಳು. ಆಕೆಯ ಬಗ್ಗೆ ಪೊಲೀಸರು ನಿಗಾ ವಹಿಸಿದ್ದರು.

ಹೈದರಾಬಾದ್‌ನಿಂದ ಹಿಂದಿರುಗುತ್ತಿರುವ ಮಾಹಿತಿ ದೊರೆತ ಕೂಡಲೇ ತೆಲಂಗಾಣ ಪೊಲೀಸರ ನೆರವಿನಿಂದ ಪತಿ-ಪತ್ನಿಯರನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ‘‘ಆಕೆಗೆ ಅಚ್ಚರಿ ಉಂಟಾಯಿತು ಹಾಗೂ ಸ್ಪಲ್ಪ ಭಯವಾಯಿತು’’ ಎಂದು ಬಾಲಕ್‌ವಾಡೆ ಹೇಳಿದ್ದಾರೆ. ಹತ್ಯೆ, ಬೆಂಕಿ ಹಚ್ಚಿರುವುದು ಹಾಗೂ ಎನ್‌ಕೌಂಟರ್ ಸಹಿತ 65ಕ್ಕೂ ಅಧಿಕ ಪ್ರಕರಣಗಳಲ್ಲಿ ನರ್ಮದಾ ಬೇಕಾದವಳಾಗಿದ್ದಾಳೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)