varthabharthi

ಕರಾವಳಿ

ಮನೆಗೆ ನುಗ್ಗಿ ಸೊತ್ತು ಕಳವು

ವಾರ್ತಾ ಭಾರತಿ : 12 Jun, 2019

ಬೈಂದೂರು, ಜೂ.12: ಶಿರೂರು ಪೇಟೆಯ ದಾಸನಾಡಿ ಕ್ರಾಸ್ ತಿಮ್ಮಣ್ಣ ನಾಯ್ಕ ದೇವಸ್ಥಾನದ ಎದುರಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

 ಜೂ.7ರ ಸಂಜೆಯಿಂದ ಜೂ.11ರ ಬೆಳಗಿನ ಮಧ್ಯಾವಧಿಯಲ್ಲಿ ಬಾಷಾ ಸಾಹೇಬ್ ಎಂಬವರ ಮನೆಯ ಸ್ಲ್ಯಾಬ್‌ನ ಮೇಲಿನ ಬಾಗಿಲನ್ನು ದೂಡಿ ಒಳ ನುಗ್ಗಿದ ಕಳ್ಳರು, ಬೆಡ್ ರೂಮಿನ ಮರದ ಕಪಾಟಿನಲ್ಲಿದ್ದ 80,000 ರೂ. ಮತ್ತು ಡೈನಿಂಗ್ ಹಾಲ್‌ನ ಕಪಾಟಿನಲ್ಲಿದ್ದ 20,000 ರೂ. ನಗದು ಹಾಗೂ ಚಿನ್ನದ ಕಿವಿ ಬೆಂಡೋಲೆ, ಚಿನ್ನದ ರಿಂಗ್ ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ 1,35,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)