varthabharthi

ಕ್ರೀಡೆ

ವಿಶ್ವಕಪ್: ಆಸೀಸ್‌ಗೆ ಶರಣಾದ ಪಾಕಿಸ್ತಾನ

ವಾರ್ತಾ ಭಾರತಿ : 12 Jun, 2019

ಟಾಂಟನ್, ಜೂ.12: ಆಸ್ಟ್ರೇಲಿಯ ತಂಡ ಬುಧವಾರ ನಡೆದ ವಿಶ್ವಕಪ್‌ನ 17ನೇ ಪಂದ್ಯದಲ್ಲಿ ಪಾಕಿಸ್ತಾನವನ್ನು 41 ರನ್‌ಗಳ ಅಂತರದಿಂದ ಮಣಿಸಿದೆ.

ಗೆಲ್ಲಲು ಕಠಿಣ ಸವಾಲು ಪಡೆದ ಪಾಕಿಸ್ತಾನ 45.4 ಓವರ್‌ಗಳಲ್ಲಿ 266 ರನ್‌ಗೆ ಆಲೌಟಾಯಿತು. ಪಾಕ್ ಪರ ಆರಂಭಿಕ ಆಟಗಾರ ಇಮಾಮ್‌ವುಲ್ ಹಕ್ ಸರ್ವಾಧಿಕ ರನ್(53, 75 ಎಸೆತ,7 ಬೌಂಡರಿ)ಗಳಿಸಿದರು.

ಮುಹಮ್ಮದ್ ಹಫೀಝ್(46), ಹಸನ್ ಅಲಿ(32), ಸರ್ಫರಾಝ್ ಅಹ್ಮದ್(40) ಹಾಗೂ ವಹಾಬ್ ರಿಯಾಝ್(45) ಎರಡಂಕೆಯ ಸ್ಕೋರ್ ಗಳಿಸಿದರು.

 ಆಸೀಸ್ ಪರ ವೇಗದ ಬೌಲರ್‌ಗಳಾದ ಕಮಿನ್ಸ್(3-33) ರಿಚರ್ಡ್‌ಸನ್(2-62) ಹಾಗೂ ಸ್ಟಾರ್ಕ್(2-43) 7 ವಿಕೆಟ್ ಹಂಚಿಕೊಂಡರು.

 ಇದಕ್ಕೂ ಮೊದಲು ಟಾಸ್ ಜಯಿಸಿದ ಪಾಕಿಸ್ತಾನ ತಂಡ ಆಸೀಸ್‌ನ್ನು ಬ್ಯಾಟಿಂಗ್‌ಗೆ ಇಳಿಸಿತು.ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಶತಕ(107, 111 ಎಸೆತ) ಹಾಗೂ ಆ್ಯರೊನ್ ಫಿಂಚ್(82, 84 ಎಸೆತ)ಅರ್ಧಶತಕದ ಕೊಡುಗೆಯ ಹೊರತಾಗಿಯೂ ವೇಗದ ಬೌಲರ್ ಮುಹಮ್ಮದ್ ಆಮಿರ್ ಜೀವನಶ್ರೇಷ್ಠ ಬೌಲಿಂಗ್‌ಗೆ (5-30)ತತ್ತರಿಸಿದ ಆಸ್ಟ್ರೇಲಿಯ ತಂಡ 49 ಓವರ್‌ಗಳಲ್ಲಿ 307 ರನ್‌ಗೆ ಸರ್ವಪತನವಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)